Slide
Slide
Slide
previous arrow
next arrow

ನಗರಸಭೆ ಮಳಿಗೆಯ ಚಾವಣಿ ಕುಸಿತ; ತಪ್ಪಿದ ಅನಾಹುತ

300x250 AD

ದಾಂಡೇಲಿ: ನಗರದ ಜೆ.ಎನ್.ರಸ್ತೆಯಲ್ಲಿರುವ ನಗರಸಭೆಯ ಅಧೀನದ ಮಳಿಗೆಯೊಂದರ ಚಾವಣಿ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ.
ನಗರಸಭೆ ಅಧೀನದ ಜೆ.ಎನ್.ರಸ್ತೆಯಲ್ಲಿರುವ ಮಳಿಗೆ ನಂ.09ರ ಚಾವಣಿ ಏಕಾಏಕಿ ಕುಸಿದಿದೆ. ಆ ಸಂದರ್ಭದಲ್ಲಿ ಅಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ಅನಾಹುತವೊಂದು ತಪ್ಪಿದಂತಾಗಿದೆ. ಸರಿಸುಮಾರು 27 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಮಳಿಗೆಗಳು ಶಿಥಿಲಾವಸ್ಥೆಯಲ್ಲಿದ್ದು, ಇಂದೋ, ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ಕೂಡಲೆ ನಗರಸಭೆ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.

300x250 AD
Share This
300x250 AD
300x250 AD
300x250 AD
Back to top