• first
    second
    third
    Slide
    Slide
    previous arrow
    next arrow
  • ಬೀಚ್ ವಾಲಿಬಾಲ್ ಪಂದ್ಯಾವಳಿ‌ ಮುಕ್ತಾಯ: ತಮಿಳುನಾಡು ಪ್ರಥಮ

    300x250 AD

    ಹೊನ್ನಾವರ: ಅಂತರಾಷ್ಟ್ರೀಯ ಮಾನ್ಯತೆ ಪಡೆದ ತಾಲೂಕಿನ ಕಾಸರಕೋಡ ಇಕೋಬೀಚ್ ಆವರದಲ್ಲಿ ನಡೆದ ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ ಮುಕ್ತಾಯಗೊಂಡಿದ್ದು ತಮಿಳುನಾಡು ತಂಡ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

    ದೇಶದ ವಿವಿಧ ಭಾಗದಿಂದ ಆಗಮಿಸಿದ ಪುರುಷ ಮತ್ತು ಮಹಿಳೆಯರ 20 ತಂಡ ಭಾಗವಹಿಸಿತ್ತು. ರವಿವಾರ ನಡೆದ ಕೊನೆಯ ದಿನದ ಪಂದ್ಯಾಟದಲ್ಲಿ ಪುರುಷ ವಿಭಾಗದಲ್ಲಿ ತಮಿಳುನಾಡು ಪ್ರಥಮ, ಆಂಧ್ರಪ್ರದೇಶ ದ್ವಿತೀಯ, ಗೋವಾ ತೃತೀಯ, ಕರ್ನಾಟಕ ಚತುರ್ಥ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ತಮಿಳುನಾಡು ಪ್ರಥಮ, ಪುದಿಚೇರಿ ದ್ವಿತೀಯ, ತೆಲಂಗಾಣ ತೃತೀಯ, ತಮಿಳುನಾಡು 2 ಚತುರ್ಥ ಸ್ಥಾನ ಪಡೆದುಕೊಂಡಿತು. ಮುಕ್ತಾಯ ಸಮಾರಂಭದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ಒಲಪಿಂಕ್ ಕೋಚ್ ಕಾಶೀನಾಥ ನಾಯ್ಕ, ಏಕಲವ್ಯ ಪ್ರಶಸ್ತಿ ವಿಜೇತ ನಾಗರಾಜ ಹೆಗಡೆ ಇನ್ನಿತರ ಉಪಸ್ಥಿತರಿದ್ದರು.

    300x250 AD

    Share This
    300x250 AD
    300x250 AD
    300x250 AD
    Back to top