• Slide
    Slide
    Slide
    previous arrow
    next arrow
  • ಶಿರಸಿಯ ವಿವಿಧ ಭಾಗಗಳಲ್ಲಿ 4 ದಿನಗಳ ವಿದ್ಯುತ್ ವ್ಯತ್ಯಯ: ವಿವರ ಇಲ್ಲಿದೆ ನೋಡಿ

    300x250 AD

    ಶಿರಸಿ : ತಾಲ್ಲೂಕಿನ ಉಪವಿಭಾಗ ವ್ಯಾಪ್ತಿಯ 2ನೇ ಕೆ.ವಿ ಮಾರ್ಗ ಹಾಗೂ ಪರಿವರ್ತನಾ ಕೇಂದ್ರಗಳ ನಿರ್ವಹಣಾ ಅಭಿಯಾನವನ್ನು ಕೈಗೊಳ್ಳುವುದರಿಂದ ಹಾಗು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡ ಕಾರಣ ಪಟ್ಟಣದ ಹಾಗು ಗ್ರಾಮೀಣ ಕೆಲ ಶಾಖೆಗಳಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 6 ಘಂಟೆಯ ತನಕ ವಿದ್ಯುತ್ ವ್ಯತ್ಯಯಗಳು ಉಂಟಾಗಲಿದೆ.

    ವಿದ್ಯುತ್ ವ್ಯತ್ಯಯ ಸ್ಥಳಗಳು ಇಂತಿವೆ:
    ಅ.2,ಬುಧವಾರದಂದು ಶಿರಸಿ ಪಟ್ಟಣ ಶಾಖಾ ವ್ಯಾಪ್ತಿಯ ಗುರುನಗರ,ಕೊಪ್ಪಳ ಕಾಲೋನಿ, ಮರಾಠಿ ಕೊಪ್ಪ, ಪ್ರಗತಿ ನಗರ,ವಿದ್ಯಾನಗರ, ಸಹ್ಯಾದ್ರಿ ಕಾಲೋನಿ, ಆದರ್ಶ ನಗರ ,ಡಿಪೊ, ಬಸಟ್ಟಿಕೆರೆ , ಕಾಲೇಜ್ ರೋಡ್ ಮತ್ತು ಲಯನ್ಸ್ ನಗರ ಹಾಗೂ ಗ್ರಾಮೀಣ ಶಾಖೆಯ 2ನೇ ಕೆವಿ ಮಾರ್ಗ ತಾರಗೋಡು ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಅ.3 ಗುರುವಾರದಂದು ಗ್ರಾಮೀಣ ಶಾಖೆಯ 2ನೇ ಕೆ.ವಿ ಮಾರ್ಗದ ದಾಸನಕೋಪ್ಪ ಬಂಕನಾಳ, ಭಾಶಿ, ಅಂಡಗಿ ಹಾಗೂ ತಿಗಣೆಯಲ್ಲಿ,‌ ಅ.4, ಶುಕ್ರವಾರದಂದು ಗ್ರಾಮೀಣ ಶಾಖೆಯ 2ನೇ ಕೆ.ವಿ ಮಾರ್ಗ ದೇವನಳ್ಳಿ, ಅ.5,ಶನಿವಾರದಂದು ಗ್ರಾಮೀಣ ಶಾಖೆಯ 2ನೇ ಮಾರ್ಗದ ಸುಗಾವಿ, ಭಾಶಿ, ಬನವಾಸಿ ಯಲ್ಲಿ ವಿದ್ಯುತ್ ವ್ಯತ್ಯಯಗಳು ಉಂಟಾಗಲಿದ್ದು ಕಾಮಗಾರಿಯು ಪೂರ್ಣಗೊಂಡಲ್ಲಿ ನಿಗಧಿತ ಅವಧಿಯ ಮುಂಚಿತವಾಗಿಯೇ ವಿದ್ಯುತ್ ಒದಗಿಸಲಾಗುತ್ತದೆ.

    300x250 AD

    ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಯ & ಪಾಲನಾ ಉಪ ವಿಭಾಗ ಹೆಸ್ಕಾಂ ಶಿರಸಿ ಪ್ರಕಟಣೆಯಲ್ಲಿ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top