Slide
Slide
Slide
previous arrow
next arrow

ಅಕ್ಷರದ ಜೊತೆ, ಜೀವನ ಪಾಠ ಕಲಿಸುತ್ತಿದ್ದ ಶಿಕ್ಷಕ ನಾಗೇಶ ಮಡಿವಾಳ ನಿಧನಕ್ಕೆ ಸಂತಾಪ

300x250 AD

ಶಿರಸಿ: ಗ್ರಾಮೀಣ ಭಾಗದ ಶಾಲೆಯೊಂದನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ರೂಪಿಸಿದ್ದ ತಾಲೂಕಿನ ಗುಬ್ಬಿಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾಗೇಶ ಮಡಿವಾಳ ನಿಧನಕ್ಕೆ ಶಾಲಾ ಎಸ್.ಡಿ.ಎಂ.ಸಿ. ಸಂತಾಪ ಸೂಚಿಸಿದೆ.
ಶನಿವಾರ ಶಾಲೆಯಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಇಟಗುಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಂಜನಾ ಹೆಗಡೆ ಮಾತನಾಡಿ, ನಾಗೇಶ ಮಡಿವಾಳ ಕೇವಲ ಅಕ್ಷರ ಕಲಿಸುವ ಶಿಕ್ಷಕರಾಗದೆ, ಜೀವನ ಕಲಿಸಿದ ಗುರುವಾಗಿದ್ದರು. ಅವರ ನಿಧನದ ಪರಿಣಾಮ ಶಾಲಾ ಮಕ್ಕಳಿಗಷ್ಟೇ ಅಲ್ಲ ಇಡಿ ಸಮಾಜದ ಮೇಲಾಗಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಹೆಗಡೆ ಮಾತನಾಡಿ, ಶಾಲಾಭಿವೃದ್ಧಿಗೆ ಬೇಕಾದ ಸ್ಪಂದನೆ ನೀಡುತ್ತಿದ್ದ ಅವರು, ತಮಗೆ ಬರುತ್ತಿದ್ದ ಸಂಬಳದಲ್ಲಿ ಕೆಲ ಪಾಲನ್ನು ಶಾಲೆಯ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಿದ್ದರು.ಇಂಥ ನಿಸ್ವಾರ್ಥ ಮನೋಭಾವದ ಶಿಕ್ಷಕರು ಎಲ್ಲರಿಗೂ ಮಾದರಿ ಎಂದರು.
ಸಿಆರ್ಪಿ ಡಿ.ಪಿ.ಹೆಗಡೆ ಇದ್ದರು. ಕಾರ್ಯಕ್ರಮದ ಅಂಗವಾಗಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top