ಶಿರಸಿ: ತಾಲೂಕಿನ ಮಣ್ಮನೆಯ ಮಾರಿಕಾಂಬಾ ದೇವಸ್ಥಾನ ಹಾಗೂ ಶಬರ ಸಂಸ್ಥೆ ಸಂಯುಕ್ತವಾಗಿ ಹಮ್ಮಿಕೊಂಡ ಸುದರ್ಶನ ವಿಜಯ ಯಕ್ಷಗಾನ ಕಾರ್ಯಕ್ರಮ ನ.1ರಂದು ರಾತ್ರಿ 9ರಿಂದ ಮಣ್ಮನೆ ನಿಸರ್ಗ ರಂಗ ಮಂದಿರದಲ್ಲಿ ನಡೆಯಲಿದೆ.
ನಾಣಿಕಟ್ಟಾ ಸೊಸೈಟಿ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತೀಹಳ್ಳಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಉದ್ಘಾಟನೆಯನ್ನು ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ನಡೆಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಪತ್ರಿಕಾ ಸಂಘದ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ, ಹಿರಿಯ ಯಕ್ಷಗಾನ ಕಲಾವಿದ ಕೆ.ಎನ್.ಹೆಗಡೆ ಪಾಲ್ಗೊಳ್ಳುವರು.
ಯಕ್ಷಗಾನ ಹಿಮ್ಮೇಳದಲ್ಲಿ ರಾಮಕೃಷ್ಣ ಹಿಲ್ಲೂರು, ಅನಿರುದ್ಧ ಬೆಣ್ಣೆಮನೆ, ಪ್ರಸನ್ನ ಹೆಗ್ಗಾರ, ಮುಮ್ಮೇಳದಲ್ಲಿ ರಾಜೇಶ ಭಂಡಾರಿ, ಚಂದ್ರಹಾಸ ಗೌಡ, ವಿನಯ ಬೇರೊಳ್ಳಿ, ಸದಾಶಿವ ಮಲವಳ್ಳಿ, ನಿರಂಜನ ಜಾಗನಳ್ಳಿ ಪಾಲ್ಗೊಳ್ಳುವರು ಎಂದು ಸಂಘಟಕರ ಪರವಾಗಿ ಪ್ರವೀಣ ಹೆಗಡೆ ಮಣ್ಮನೆ, ನಾಗರಾಜ ಜೋಶಿ ಸೋಂದಾ ತಿಳಿಸಿದ್ದಾರೆ.