• Slide
  Slide
  Slide
  previous arrow
  next arrow
 • ಮಂಜಗುಣಿಯಲ್ಲಿ ಪುನೀತ ರಾಜಕುಮಾರ್ ಪ್ರಥಮ ಪುಣ್ಯಸ್ಮರಣೆ

  300x250 AD

  ಅಂಕೋಲಾ: ನಟ ಪುನೀತ ರಾಜಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ತಾಲೂಕಿನ ಮಂಜಗುಣಿಯಲ್ಲಿ ಪುನೀತ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಇದರ ವಿಶೇಷವಾಗಿ ವಿದ್ಯುತ್ ಅಲಂಕಾರ, ಹೂವುಗಳಿಂದ ಅಲಂಕರಿಸಲಾಗಿತ್ತು.

  ಪುನೀತ ರಾಜಕುಮಾರ್ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ನಾಯ್ಕ ಮಾತನಾಡಿ, ಪುನೀತ ರಾಜಕುಮಾರ್ ನಾಡಿಗೆ ನೀಡಿದ ಸೇವೆ ಅಪಾರವಾದದ್ದು. ಇವರ ನೆನಪು ಸದಾ ಇರಲಿ ಎನ್ನುವ ಕಾರಣಕ್ಕಾಗಿ ನಮ್ಮ ಊರಿನಲ್ಲಿ ಪುತ್ಥಳಿಯನ್ನು ನಿರ್ಮಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

  ಸಮಿತಿಯ ಪ್ರಮುಖರಾದ ಜಿ.ಆರ್.ತಾಂಡೇಲ ಮಾತನಾಡಿ, ಕನ್ನಡ ನಾಡು ನುಡಿಗೆ ಡಾ. ರಾಜಕುಮಾರ ಕುಟುಂಬದ ಕೊಡುಗೆ ಅಪಾರವಾದದ್ದು. ಇನ್ನು ಪುನೀತ ರಾಜಕುಮಾರ ಸಾಮಾಜಿಕ ಸೇವೆ ಅವರ ನಿಧನದ ನಂತರ ತಿಳಿದು ಬಂದದ್ದು. ಹೀಗಾಗಿ ಪ್ರತಿಯೊಬ್ಬರು ಪುನೀತ ರಾಜಕುಮಾರ ಕಳೆದುಕೊಂಡ ನೋವು ಅರಗಿಸಿಕೊಳ್ಳಲಾರದಂತಾಗಿದೆ ಎಂದರು.

  300x250 AD

  ಸಮಿತಿಯ ಅಧ್ಯಕ್ಷ ನಾಗರಾಜ ಮಂಜಗುಣಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ವಿ.ನಾಯ್ಕ, ಪದಾಧಿಕಾರಿಗಳಾದ ಲೀಲಾವತಿ ನಾಯ್ಕ, ಸಂತೋಷ ವಿ.ನಾಯ್ಕ, ವೆಂಕಟ್ರಮಣ ಕೆ.ನಾಯ್ಕ, ಅನಿಲ ಜಾನು ನಾಯ್ಕ, ಅನಿಲ ಎಂ.ನಾಯ್ಕ, ಗಣೇಶ ವಿ. ನಾಯ್ಕ, ರವಿ ಎನ್. ನಾಯ್ಕ, ಸಚಿನ್ ಎನ್.ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top