• Slide
    Slide
    Slide
    previous arrow
    next arrow
  • ನ.1ಕ್ಕೆ ಕುಮಟಾದಲ್ಲಿ ನುಡಿ ಹಬ್ಬ: ಪ್ರೊ.ಎಂ.ಜಿ.ಭಟ್ಟ

    300x250 AD

    ಕುಮಟಾ: ಕನ್ನಡ ರಾಜ್ಯೋತ್ಸವ ಸಮಿತಿಯ ಆಶ್ರಯದಲ್ಲಿ ಪಟ್ಟಣದ ಮಣಕಿ ಮೈದಾನದಲ್ಲಿ ನ.1ರಂದು ಸಂಜೆ 7.30 ಘಂಟೆಗೆ ನುಡಿ ಹಬ್ಬ- 2022 ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಜಿ.ಭಟ್ಟ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 13 ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಕೊರೋನಾ ಕಾರಣದಿಂದ ಕಳೆದ 2 ವರ್ಷಗಳಿಂದ ವಿಜೃಂಭಣೆಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಈ ವರ್ಷ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ಸಂಜೆ 5 ಘಂಟೆಗೆ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯಲಿದ್ದು, ಸಂಜೆ 7.30 ಘಂಟೆಗೆ ಸಭಾ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದಾರೆ. ವಾಗ್ಮಿ ಚಕ್ರವರ್ತಿ ಸುಲಿಬೆಲೆ ಕನ್ನಡದ ಅಭಿಮಾನದ ನುಡಿ ಆಡಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ, ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ವಿಕ್ರಮ ಪ್ರಭು, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಜಾನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಶಾರದಾ ಮೊಗೇರ ಇವರನ್ನು ಸನ್ಮಾನಿಸಲಾಗುವುದು ಎಂದರು.

    ಸಭಾ ಕಾರ್ಯಕ್ರಮದ ನಂತರ ಸಿದ್ದಾಪುರದ ಸ್ಮಾರ್ಟ್ ಡ್ಯಾನ್ಸ್ ಮತ್ತು ಮ್ಯೂಸಿಕ್ ಅಕಾಡೆಮಿಯಿಂದ ರಸಮಂಜರಿ, ಶಾಂತಿಕಾಂಬಾ ಡಾನ್ಸ್ ಗ್ರೂಪ್‌ನ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ವಿವಿಧ ಕಲಾವಿದರಿಂದ ಮಿಮಿಕ್ರಿ ಮತ್ತು ನೃತ್ಯಗಳನ್ನು ಆಯೋಜಿಸಿದ್ದೇವೆ. ಸಂಜೆ ನಡೆಯಲಿರುವ ಬೈಕ್ ರ‍್ಯಾಲಿ ಮತ್ತು ಮೆರವಣಿಗೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

    300x250 AD

    ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹೇಮಂತಕುಮಾರ ಗಾಂವಕರ, ಪ್ರಕಾಶ ನಾಯ್ಕ, ವೆಂಕಟೇಶ ಹೆಗಡೆ, ಗೋಪಾಲ ಮುಕ್ರಿ, ಮೋಹಿನಿ ಗೌಡ, ನೇತ್ರಾವತಿ ಗೌಡ, ಜಯಾ ಶೇಟ್, ಮಂಜುನಾಥ ಪಟಗಾರ, ಭಾಸ್ಕರ ಹರಿಕಂತ್ರ ಸೇರಿದಂತೆ ಮತ್ತಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top