• Slide
  Slide
  Slide
  previous arrow
  next arrow
 • ಕೆಲವೇ ದಿನದಲ್ಲಿ ಪಕ್ಷೇತರನಾ, ಅಥವಾ ಜೆಡಿಎಸ್‌ನಿಂದ ಕಣಕ್ಕೆ ಇಳಿಯುತ್ತೇನಾ ಎನ್ನುವ ಬಗ್ಗೆ ತಿಳಿಸಲಾಗುವುದು: ಅಸ್ನೋಟಿಕರ್

  300x250 AD

  ಕಾರವಾರ: ಪಕ್ಷೇತರವಾಗಿ ಚುನಾವಣೆಗೆ ನಿಂತರೇ ನಾಮಪತ್ರ ಸಲ್ಲಿಸಿ ಪರಿಶೀಲನೆಯಾದ ನಂತರ ಚಿಹ್ನೆ ಬರುತ್ತದೆ. ಆಗ ಜನರಿಗೆ ಚಿಹ್ನೆಯ ಬಗ್ಗೆ ತಿಳಿಸಲು ಗೊಂದಲವಾಗಬಹುದು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷದಿಂದಲೇ ಚುನಾವಣೆಗೆ ನಿಲ್ಲುವ ಚಿಂತನೆಯನ್ನ ಮಾಡಿದ್ದು ಕೆಲವೇ ದಿನದಲ್ಲಿ ಪಕ್ಷೇತರನಾ, ಅಥವಾ ಜೆಡಿಎಸ್‌ನಿಂದ ಕಣಕ್ಕೆ ಇಳಿಯುತ್ತೇನಾ ಎನ್ನುವ ಬಗ್ಗೆ ತಿಳಿಸಲಾಗುವುದು ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದರು.
  ಕಾರವಾರ- ಅಂಕೋಲಾ ಕ್ಷೇತ್ರದ ಹಿರಿಯ ಮುಖಂಡರುಗಳ ಮನೆಗೆ ಭೇಟಿ ನೀಡಿ ಈಗಾಗಲೇ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದೇನೆ. ಹಲವರು ಹಲವು ಅಭಿಪ್ರಾಯಗಳನ್ನ ನೀಡಿದ್ದಾರೆ. ಕೆಲವರು ಬಿಜೆಪಿಯಿಂದ ಟಿಕೇಟ್ ತನ್ನಿ ಎಂದು ಒತ್ತಾಯಿಸಿದರೆ, ಇನ್ನು ಕೆಲವರು ಪಕ್ಷೇತರವಾಗಿಯೇ ಕಣಕ್ಕೆ ಇಳಿಯುವಂತೆ ತಿಳಿಸಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಚಿಹ್ನೆ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಜೆಡಿಎಸ್ ನಿಂದ ಸಹ ಕಣಕ್ಕೆ ಇಳಿಯಲು ಕೆಲವರು ಸಲಹೆ ನೀಡಿದ್ದಾರೆ. ಯಾವುದೂ ಸರಿಯಾಗದಿದ್ದರೇ ಕ್ಷೇತ್ರದ ಅಭಿವೃದ್ದಿಗೆ ಒಳ್ಳೆಯ ಅಭ್ಯರ್ಥಿಗೂ ತಾನು ಸಪೋರ್ಟ್ ನೀಡುವ ಚಿಂತನೆಯನ್ನ ನಡೆಸಿದ್ದೇನೆ ಎಂದು ಹೇಳಿದ್ದಾರೆ.
  ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾಗುವಂತೆ ತಿಳಿಸಿದ್ದು ಈ ವಾರದಲ್ಲಿ ಭೇಟಿ ಮಾಡುತ್ತೇನೆ. ಅಷ್ಟೇ ಅಲ್ಲದೇ ಬಿಜೆಪಿಯ ತನ್ನ ಹಿರಿಯ ಸ್ನೇಹಿತರನ್ನ ಸಹ ಭೇಟಿ ಮಾಡುತ್ತೇನೆ. ಹಿರಿಯರ ಸಲಹೆ ಪಡೆದೇ ನವೆಂಬರ್ ತಿಂಗಳಿಂದ ಕ್ಷೇತ್ರದಲ್ಲಿ ಚುನಾವಣೆಗಾಗಿ ಓಟಾಟ ಪ್ರಾರಂಭಿಸುತ್ತೇನೆ. ನಾನು ಈಗಲೂ ಬಿಜೆಪಿ ಟಿಕೇಟ್ ಗಾಗಿ ಪ್ರಯತ್ನಿಸುವುದಿಲ್ಲ. ಕಾರವಾರ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಶಾಸಕಿ ರೂಪಾಲಿ ನಾಯ್ಕ ಅವರಿಗೆ ನೀಡುವಂತೆ ಒತ್ತಾಯಿಸುತ್ತೇನೆ ಎಂದರು.
  ನನಗೆ ಶಾಸಕ ಆಗುವುದಕ್ಕಿಂತ ಕ್ಷೇತ್ರದ ಅಭಿವೃದ್ದಿ ಮುಖ್ಯವಾಗಿದೆ. ಈ ಬಾರಿ ಕಾರವಾರ ಅಂಕೋಲಾ ಕ್ಷೇತ್ರದಿಂದ ಆಯ್ಕೆಯಾಗುವವರು ರಾಜ್ಯ ಸರ್ಕಾರದ ನಿರ್ಣಾಯಕರಾಗಬೇಕು ಎನ್ನುವುದು ನನ್ನ ಬಯಕೆಯಾಗಿದೆ. ಏಕೆಂದರೆ ಮುಂದಿನ ಸರ್ಕಾರದಲ್ಲಾದರು ಕ್ಷೇತ್ರದಿಂದ ಆಯ್ಕೆಯಾದವರು ತನ್ನ ಪ್ರಭಾವ ಬೀರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಷೇತ್ರಕ್ಕೆ ಉದ್ಯೋಗ ಸೃಷ್ಟಿ ಮಾಡಲು ಕೈಗಾರಿಕೆಗಳನ್ನ ತರಲಿ. ಅಲ್ಲದೇ ಹೈದ್ರಾಬಾದ್ ಕರ್ನಾಟಕ ಮಾದರಿಯಲ್ಲಿ ಕೊಂಕಣಿ ಮಾತನಾಡುವ ಕಾರವಾರ ಭಾಗಕ್ಕೆ ಗೋವಾ ಕರ್ನಾಟ ಎಂದು ವಿಶೇಷ ಸ್ಥಾನಮಾನ ಘೋಷಿಸಲಿ ಎಂದರು.
  ಕಾರವಾರ ನಗರಸಭೆಯನ್ನ ಮುಂದಿನ ದಿನದಲ್ಲಿ ಮಹಾನಗರ ಪಾಲಿಕೆಯನ್ನಾಗಿ ಮುಂದಿನ ದಿನದಲ್ಲಿ ಮಾಡಬೇಕು. ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ 60 ಸಾವಿರ ಜನಸಂಖ್ಯೆ ಇದ್ದು, ಮಹಾನಗರ ಪಾಲಿಕೆ ಮಾಡಲು 1 ಲಕ್ಷ ಜನರು ಇರಬೇಕು. ಕಾರವಾರ ಸುತ್ತಮುತ್ತಲಿನ ಚಿತ್ತಾಕುಲ, ಅಸ್ನೋಟಿ, ಮಾಜಾಳಿ, ಶಿರವಾಡ, ಚಂಡ್ಯಾ, ಅಮದಳ್ಳಿ ಪಂಚಾಯತ್ ಸೇರಿಸಿದರೆ ಒಂದು ಲಕ್ಷ ಜನಸಂಖ್ಯೆಯಾಗುತ್ತದೆ. ಮಹಾನಗರ ಪಾಲಿಕೆಯಾದರೆ ನಗರೋತ್ಥಾನ ಯೋಜನೆಯಡಿ ಕೋಟಿಗಟ್ಟಲೇ ಹಣ ಅಭಿವೃದ್ದಿಗಾಗಿ ಬರಲಿದ್ದು ಮುಂದೆ ಆಯ್ಕೆಯಾಗುವವರು ಈ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದರು.
  ನನ್ನ ಕುಟುಂಬಕ್ಕೆ ಕೋಮಾರಪಂಥ ಸಮಾಜದವರು ಬೆಂಬಲ ಹಿಂದಿನಿಂದ ಮಾಡಿಕೊಂಡು ಬಂದಿದ್ದು ಅವರ ಕೊಡುಗೆ ಅಪಾರವಿದೆ ಎಂದು ಆನಂದ್ ಅಸ್ನೋಟಿಕರ್ ಹೇಳಿದರು.
  ಕೋಮಾರಪಂಥ ಸಮಾಜಕ್ಕೆ ಚಿರಖುಣಿಯಾಗಿ ನಾನು ಸಚಿವನಿದ್ದ ವೇಳೆಯಲ್ಲಿ ಹೇಂಜಾ ನಾಯ್ಕ ಪ್ರತಿಮೆಯನ್ನ ಮಾಡಿಸಿದ್ದೆ. ಸಮಾಜದ ಬಗ್ಗೆ ಇಂದಿಗೂ ಅಪಾರ ಗೌರವವಿದೆ. ಅಂಕೋಲಾದಲ್ಲಿ ನಡೆದ ಹೊಂಡೆ ಆಟದ ಸಂದರ್ಭದಲ್ಲಿ ಶಾಸಕರು ಅಲ್ಲಿಗೆ ಭೇಟಿ ನೀಡಿದಾಗ ಅವರು ಸಮಾಜದವರಿಗೆ ಕ್ಷಮೆ ಕೇಳುತ್ತಾರೆ ಅಂದುಕೊಂಡಿದ್ದೆ . ಸಮಾಜದ ಮಾಧವ ನಾಯ್ಕರಿಗೆ 3 ಸಾವಿರ ಮತಗಳನ್ನ ಪಡೆದಿದ್ದರು ಎಂದು ಶಾಸಕರು ಸಮಾಜಕ್ಕೆ ಅವಮಾನ ಮಾಡಿದಾಗ ಹಲವು ಸಮಾಜದ ಮುಖಂಡರು ಶಾಸಕರ ವಿರುದ್ಧ ಟೀಕೆ ಮಾಡಿದ್ದು ಈ ಕಾರಣಕ್ಕೆ ಕ್ಷಮೆ ಕೇಳುತ್ತಾರೆ ಅಂದುಕೊಂಡಿದ್ದೆವು . ಮುಂದಿನ ದಿನದಲ್ಲಾದರು ಶಾಸಕರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಅಸ್ನೋಟಿಕರ್ ಹೇಳಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top