Slide
Slide
Slide
previous arrow
next arrow

ಸರಕಾರಿ ಕಾಲೇಜಿನ ಬಿಬಿಎ ವಿಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶ

300x250 AD

ಅಂಕೋಲಾ: ಕರ್ನಾಟಕ ವಿಶ್ವವಿದ್ಯಾಲಯವು ಬಿ.ಬಿ.ಎ ವಿಭಾಗದ ಅಂತಿಮ ಸೆಮಿಸ್ಟರ್‌ನ ಫಲಿತಾಂಶ ಪ್ರಕಟಿಸಿದ್ದು, ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಬಿ.ಎ ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ನೀಡುವುದರ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ರೇಶ್ಮಾ ನಾಯ್ಕ ಶೇ. 91 ಪ್ರಥಮ, ಶಿವಾನಿ ರವೀಂದ್ರನಾಥ ಶೇಟ್ ಶೇ. 84 ದ್ವಿತೀಯ, ಸಯದಾ ಬಿಬಿ ಆಯೇಷಾ ಶಿರಿನ್ ಶೇ. 82.5 ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಚಾರ್ಯ ಡಾ.ಎನ್.ಎಂ.ಖಾನ್, ವಿಭಾಗ ಮುಖ್ಯಸ್ಥೆ ಡಾ. ಎಂ. ವೀಣಾ, ಉಪನ್ಯಾಸಕರಾದ ಶೀತಲ ಎಂ. ಗಡ್ಕರ್, ಆನಂದ ಭಂಡಾರಿ, ಪ್ರಶಾಂತ ರೇವಣಕರ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top