• Slide
    Slide
    Slide
    previous arrow
    next arrow
  • ಇಂದಿನಿಂದ ರಾಷ್ಟ್ರ ಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ

    300x250 AD

    ಹೊನ್ನಾವರ: ಯುವಕರ ಮತ್ತು ಯುವತಿಯರ 20 ತಂಡಗಳು ಪಾಲ್ಗೊಳ್ಳುವ ರಾಷ್ಟ್ರ ಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ ಕಾಸರಕೋಡ ಇಕೋ ಬೀಚ್ ಬಳಿ ಅ.28ರಿಂದ 30ರವರೆಗೆ ಮೂರು ದಿನ ನಡೆಯಲಿದೆ. ಬೆಳಿಗ್ಗೆ ಮತ್ತು ಸಂಜೆ, ರಾತ್ರಿಯ ತನಕ ನಡೆಯುವ ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳ ಯುವಕರ ಮತ್ತು ಯುವತಿಯರ ತಲಾ 10 ತಂಡಗಳು ಪಾಲ್ಗೊಳ್ಳಲಿವೆ.
    ಮೂರು ದಿನ ನಡೆಯುವ ಈ ಪಂದ್ಯಾವಳಿಯನ್ನು ಅ.28ರಂದು ಸಂಜೆ 5.30ಕ್ಕೆ ಗಣ್ಯರು ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟಕ್ಕಾಗಿ ಮೂರು ಕ್ರೀಡಾಂಗಣವನ್ನು ಸಿದ್ಧಪಡಿಸಲಾಗಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕ್ರೀಡಾಇಲಾಖೆಯ ಸಚಿವ ನಾರಾಯಣ ಗೌಡ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮತ್ತು ಶಾಸಕರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಪಟುಗಳು, ನಿರ್ಣಾಯಕರುಗಳು, ಅಧಿಕಾರಿಗಳು ಸೇರಿ ನೂರು ಜನ ಜಿಲ್ಲೆಯ ಹೊರಗಿನಿಂದ ಆಗಮಿಸಲಿದ್ದು, ಅವರಿಗಾಗಿ ರೆಸಾರ್ಟ್ಗಳನ್ನು ಕಾದಿಡಲಾಗಿದೆ. ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಯುವಸಬಲೀಕರಣ ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ವಾಲಿಬಾಲ್ ಫೆಡರೇಶನ್ ಇದನ್ನು ಸಂಘಟಿಸಿದ್ದು, ಅಂದಾಜು 50 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಜಿಲ್ಲೆಯ ಪ್ರವಾಸೋದ್ಯಮ ಆಕರ್ಷಣೆ ಹೆಚ್ಚಿಸಲು ಇದನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದು, 50ಕ್ಕೂ ಹೆಚ್ಚು ಅಧಿಕಾರಿಗಳು ತಿಂಗಳಿನಿಂದ ಇದಕ್ಕಾಗಿ ಸಿದ್ಧತೆ ನಡೆಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top