• Slide
    Slide
    Slide
    previous arrow
    next arrow
  • ಹಬ್ಬಗುಳು ಆಚರಣೆ: ಗಮನ ಸೆಳೆಯುವ ಆಕರ್ಷಕ ಫಲಾವಳಿ

    300x250 AD

    ಕುಮಟಾ: ಬೆಳಕಿನ ಹಬ್ಬ ದೀಪಾವಳಿ ನಿಮಿತ್ತ ತಾಲೂಕಿನ ವಾಲಗಳ್ಳಿಯಲ್ಲಿ ಹಬ್ಬಗುಳು ಆಚರಣೆ ವಿಶೇಷವಾಗಿದ್ದು, ವಾಲಗಳ್ಳಿಯ ಮುಖ್ಯ ರಸ್ತೆಯಲ್ಲಿ ಹಾರೋಡಿಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯ ಭಕ್ತರು ಕಟ್ಟಿರುವ ಆಕರ್ಷಕ ಫಲಾವಳಿ ನೋಡುಗರ ಗಮನ ಸೆಳೆಯುತ್ತಿದೆ.
    ತಾಲೂಕಿನ ವಾಲಗಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಲಕೇರಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕಾಂಚಿಕಾ ಪರಮೇಶ್ವರಿ ಮತ್ತು ಹಾರೋಡಿಯ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವತಿಯಿಂದ ಪ್ರತಿವರ್ಷವು ಈ ಹಬ್ಬಗುಳು ಆಚರಣೆ ನಡೆಸಲಾಗುತ್ತದೆ. ಕಾಂಚಿಕಾ ಪರಮೇಶ್ವರಿ ಹಾಗೂ ಕನ್ನಿಕಾ ಪರಮೇಶ್ವರಿ ಇವರಿಬ್ಬರು ಸಹೋದರಿಯಾಗಿರುವುದರಿಂದ ಒಂದು ವರ್ಷ ಕಾಂಚಿಕಾ ಪರಮೇಶ್ವರಿ ಹಾಗೂ ಇನ್ನೊಂದು ವರ್ಷ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಈ ಹಬ್ಬಗುಳುವಿನ ಹರಾಜಿನಿಂದ ಬಂದಂತಹ ಆದಾಯವನ್ನು ಕ್ರಮವಾಗಿ ಬಳಸಿಕೊಳ್ಳಲಾಗುತ್ತದೆ.
    ವಾಲಗಳ್ಳಿ ಕಲಕೇರಿ ಹಾಗೂ ಹಾರೋಡಿ ಗ್ರಾಮಸ್ಥರು ಹಬ್ಬದ 2ನೇ ದಿನದಂದು ಆ ಗ್ರಾಮದ ಎಲ್ಲ ಮನೆಗಳಿಗೆ ತೆರಳಿ ಅಡಿಕೆ, ಅಕ್ಕಿ, ತೆಂಗಿನಕಾಯಿ, ಬಾಳೆಗೊನೆ ಹಾಗೂ ಇತರೆ ಹಣ್ಣುಗಳನ್ನು ಕಾಣಿಕೆ ರೂಪದಲ್ಲಿ ಪಡೆಯುತ್ತಾರೆ. ಬಳಿಕ ಆ ಸಾಮಗ್ರಿಗಳನ್ನು ವಾಲಗಳ್ಳಿಯ ಮುಖ್ಯ ರಸ್ತೆಯಲ್ಲಿ ಫಲಾವಳಿ ಕಟ್ಟುತ್ತಾರೆ. ಒಂದು ವರ್ಷ ವಾಲಗಳ್ಳಿಯ ಹಿರಿಯ ಪ್ರಾಥಮಿಕ ಶಾಲೆ ಕ್ರಾಸ್ ಮುಖ್ಯ ರಸ್ತೆಯಲ್ಲಿ ಹಾಗೂ ಇನ್ನೊಂದು ವರ್ಷ ವಾಲಗಳ್ಳಿಯ ಮುಖ್ಯ ರಸ್ತೆಯ ಪ್ರಧಾನ ದ್ವಾರದ ಬಳಿ ಕಟ್ಟುತ್ತಾರೆ. ಗೋ ಪೂಜೆಯ ಮಾರನೇ ದಿನ ಫಲಾವಳಿಗಳನ್ನು ಸವಾಲು ಕರೆಯುತ್ತಾರೆ. ಅದರಿಂದ ಸಂಗ್ರಹವಾದ ಹಣವನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿಕೊಳ್ಳುವ ಪ್ರತೀತಿ ಇದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top