• first
  second
  third
  Slide
  Slide
  previous arrow
  next arrow
 • ಯಕ್ಷಗಾನಕ್ಕೂ,ಜೀವನಕ್ಕೂ ಅವಿನಾಭಾವ ಸಂಬಂಧ: ಶ್ರೀನಿವಾಸ ಭಟ್

  300x250 AD

  ಶಿರಸಿ: ಯಕ್ಷಗಾನಕ್ಕೂ, ನಮ್ಮ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ಯಕ್ಷಗಾನದಲ್ಲಿ ಕಲಾವಿದನ ಕುಣಿತವನ್ನು ಜನ ಗಮನಿಸಿ ಪ್ರೋತ್ಸಾಹಿಸಿದಂತೆ ನಮ್ಮ ಜೀವನದಲ್ಲಿಯೂ ನಮ್ಮ ವರ್ತನೆ ನೋಡಿ ಜನ ಗೌರವ ನೀಡುತ್ತಾರೆ ಎಂದು ಮಂಜುಗುಣಿ ಶ್ರೀ ವೆಂಕಟರಮಣ ದೇವಾಲಯದ ಪ್ರಧಾನ ಅರ್ಚಕ, ವಿದ್ವಾಂಸ ಶ್ರೀನಿವಾಸ ಭಟ್ ಹೇಳಿದರು.

   ತಾಲೂಕಿನ ಮಂಜುಗುಣಿಯಲ್ಲಿ ಶಬರ ಸಂಸ್ಥೆ ಸೋಂದಾ, ಮಂಜುಗುಣಿ ದೇವಾಲಯದ ಸಹಕಾರದಲ್ಲಿ ಆಯೋಜಿಸಲಾಗಿದ್ದ ಕೀಚಕ ವಧೆ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

  ಕುಣಿತ ಎನ್ನುವುದು ಪ್ರಕೃತಿಯ ನಿಯಮ. ಯಕ್ಷಗಾನದಲ್ಲಿ ಗಾನ ಎಂಬ ಶಬ್ದವಿದ್ದರೂ ಕುಣಿತಕ್ಕೆ ಪ್ರಾಧಾನ್ಯತೆ ಇದೆ. ಈ ಕಲೆ ನಮ್ಮ ಜೀವನದೊಂದಿಗೆ ಸಮ್ಮಿಳಿತಗೊಂಡಿದೆ. ಬಾಲ್ಯದಲ್ಲಿ ನಾವು ಕುಣಿಯುತ್ತೇವೆ, ಆಟ ಆಡುತ್ತೇವೆ. ಜೀವನದ ಕುಣಿತ ಒಂದು ಗಾಳದ ಅಡಿಯಲ್ಲಿರಲಿ ಎಂಬುದನ್ನು ಯಕ್ಷಗಾನ ಸೂಚಿಸುತ್ತದೆ.

  ದಕ್ಷಿಣ ಕನ್ನಡದಲ್ಲಿ ಯಕ್ಷಗಾನಕ್ಕೆ ಬೆಳಕಿನ ಸೇವೆ ಎಂದು ಕರೆಯಲಾಗುತ್ತದೆ. ಅಲ್ಲಿ 18 ಕ್ಕೂ ಅಧಿಕ ಮೇಳಗಳು ದೇವಾಲಯಗಳಲ್ಲಿ ಹರಕೆಯನ್ನು ತೀರಿಸುವ ಸಲುವಾಗಿಯೇ ಯಕ್ಷಗಾನ ಪ್ರದರ್ಶನ ನೀಡುತ್ತವೆ. ಯಕ್ಷಗಾನದಲ್ಲಿ ಕೇಳುವಿಕೆ ಮತ್ತು ನೋಡುವಿಕೆ ಜೊತೆ ಜೊತೆಯಾಗಿ ಸಾಗುತ್ತವೆ. ನಮ್ಮ ಬದುಕೂ ಸಹ ಹಾಗೇ ಇದೆ. ನಮ್ಮ ವರ್ತನೆಯನ್ನು ಲೋಕ ನೋಡುತ್ತದೆ. ಯಕ್ಷಗಾನದಲ್ಲಿ ಕಲಾವಿದ ಉತ್ತಮವಾಗಿ ಕುಣಿದಾಗ ನಮಗೆ ಗೊತ್ತಿಲ್ಲದೇ ಕರತಾಡನ ಮಾಡಿರುತ್ತೇವೆ.

   ಬದುಕಿನಲ್ಲಿ ಸಹ ನಮ್ಮ ವರ್ತನೆಗಳು ಜನ ಮೆಚ್ಚುವಂತಿರಬೇಕು. ಹೀವೆ ಬದುಕಲು ನಮ್ಮನ್ನು ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ಪ್ರಾಮಾಣಿಕತೆ ಮುನ್ನೆಲೆಗೆ ಬಂದಾಗ ಯಶಸ್ಸು ದೊರೆಯುತ್ತದೆ ಎಂದರು.

  300x250 AD

  ಶಬರ ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ಮಾತನಾಡಿ, ಸಮಾಜದಲ್ಲಿ ಈ ವರೆಗೆ ಗುರುತಿಸಲ್ಪಡದೇ ಇರುವ, ಬದುಕಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದವರನ್ನು ಗುರುತಿಸುವಿಕೆ ಶಬರ ಸಂಸ್ಥೆಯ ಉದ್ದೇಶವಾಗಿದೆ. ನಮ್ಮಲ್ಲಿ ಪ್ರಚಾರ ಪಡೆಯದ, ಕಲೆಯನ್ನು ಆರಾಧ್ಯವಾಗಿ ಶ್ರಮಿಸಿದ ಅನೇಕ ಕಲಾವಿದರಿದ್ದಾರೆ. ಅವರನ್ನು ಗುರುತಿಸುವಿಕೆ ಶಬರದಿಂದ ಆಗುತ್ತಿದೆ. ಶಾಲಾ ಮಕ್ಕಳಲ್ಲಿಯೂ ಯಕ್ಷಗಾನದ ಜ್ಞಾನ ಮೂಡಿಸಿ, ಶಿಕ್ಷಣದೊಂದಿಗೇ ಯಕ್ಷಗಾನವನ್ನೂ ಕಲಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸ್ಥಳೀಯ ಕಲಾವಿದರನ್ನು ಒಳಗೊಂಡು ಯಕ್ಷಗಾನ ಪ್ರದರ್ಶನ ಆಯೋಜಿಸುವವರಿಗೆ ಸಂಸ್ಥೆ ಸಹಕಾರಕ್ಕೆ ನಿಲ್ಲುತ್ತದೆ ಎಂದರು.  ಕನ್ನಡಪ್ರಭ ವರದಿಗಾರ ಮಂಜುನಾಥ ಸಾಯೀಮನೆ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರದಲ್ಲಿ ತೊಡಗಿಕೊಂಡರೆ ನೆಮ್ಮದಿ ‌ಸಾಧ್ಯ ಎಂದರು.

  ಹಿರಿಯ ಯಕ್ಷಗಾನ ಕಲಾವಿದ ರಾಮಾಪೂಜಾರಿ ಮಂಜುಗುಣಿ ಅವರನ್ನು  ಸನ್ಮಾನಿಸಲಾಯಿತು. ಕರುಣಾಕರ ಹೆಗಡೆ ಸ್ವಾಗತಿಸಿದರು. ಭುವನೇಶ್ವರಿ ಜೋಶಿ ವಂದಿಸಿದರು.

  ಬಳಿಕ ನಡೆದ ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಿರುದ್ಧ ಬೆಣ್ಣೆಮನೆ, ಪ್ರಸನ್ನ ಭಟ್ಟ ಹೆಗ್ಗಾರ, ಮುಮ್ಮೇಳದಲ್ಲಿ ನೀಲಕೋಡ ಶಂಕರ ಹೆಗಡೆ, ಶ್ರೀಧರ ಹೆಗಡೆ ಚಪ್ಪರಮನೆ, ಉದಯ ಕಡಬಾಳ, ನಾಗರಾಜ ಕುಂಕಿಪಾಲ, ಸಂತೋಷ ಕಡಕಿನಬೈಲ್, ನಿರಂಜನ ಜಾಗನಳ್ಳಿ ಇತರರು ಇದ್ದರು.

  Share This
  300x250 AD
  300x250 AD
  300x250 AD
  Back to top