• Slide
  Slide
  Slide
  previous arrow
  next arrow
 • ಅ.29ರಂದು ‘ಸರಸ್ವತಿ ಕಲಾ ಟ್ರಸ್ಟ್’ ಲೋಕಾರ್ಪಣೆ

  300x250 AD

  ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊಸಗದ್ದೆಯ ಸರಸ್ವತಿ ನಿಲಯದಲ್ಲಿ ‘ಸರಸ್ವತಿ ಕಲಾ ಟ್ರಸ್ಟ್ (ರಿ) ಹೊಸಗದ್ದೆ ‘ ಲೋಕಾರ್ಪಣೆ ಹಾಗೂ ಡಾ.ಜಿ.ಎಂ.ಹೆಗಡೆ ಬೊಮ್ನಳ್ಳಿ ಅವರಿಗೆ ಗೌರವ ಸಮರ್ಪಣೆ ಅ.29ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ.
  ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ಟ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪ್ರಗತಿಪರ ಕೃಷಿಕ ಶ್ರೀಧರ ಹೆಗಡೆ ವಾಟೆಹಕ್ಲ ಅಧ್ಯಕ್ಷತೆವಹಿಸುವರು. ಖ್ಯಾತ ಯಕ್ಷಗಾನ ಕಲಾವಿದ ಶೀರಳಗಿ ಭಾಸ್ಕರ ಜೋಷಿ, ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ, ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ, ಸದಸ್ಯ ಅನಂತ ಹೆಗಡೆ ಹೊಸಗದ್ದೆ ಉಪಸ್ಥಿತಿರುತ್ತಾರೆ.
  ಗೌರವ ಸಮರ್ಪಣೆ: ಹಾರ್ಸಿಕಟ್ಟಾದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ.ಜಿ.ಎಂ.ಹೆಗಡೆ ಬೊಮ್ನಳ್ಳಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಅಭಿನಂದನಾ ಮಾತನಾಡಲಿದ್ದಾರೆ.
  ನಂತರ ಜಾಂಬವತಿ ಪರಿಣಯ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು ಹಿಮ್ಮೇಳದಲ್ಲಿ ಮಾಧವ ಭಟ್ಟ ಕೊಳಗಿ, ಶ್ರೀಕಾಂತ ಹೆಗಡೆ ಹಣಜೀಬೈಲ್ ಸಹಕರಿಸುವರು.ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಮಂಜುನಾಥ ಗೊರಮನೆ, ಗಣಪತಿ ಹೆಗಡೆ ಗುಂಜಗೋಡ, ಪಿ.ವಿ.ಹೆಗಡೆ ಹೊಸಗದ್ದೆ, ನಾಗರಾಜ ಮತ್ತಿಗಾರ, ಕು.ಅಭಯ ಹೆಗಡೆ ಹಾಗೂ ಕು.ಭೂಮಿಕಾ ಹೆಗಡೆ ಪಾಲ್ಗೊಳ್ಳಲಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top