Slide
Slide
Slide
previous arrow
next arrow

ಸಿಬ್ಬಂದಿಗಳ ಹಿತ ಬಯಸುವ ಪಿಎಸ್‌ಐ ನಾಗಪ್ಪನವರ ಕಾರ್ಯ ಶ್ಲಾಘನೀಯ: ಎಸ್ಪಿ

300x250 AD

ಕಾರವಾರ: ನಗರದ ಸಂಚಾರ ಠಾಣೆ ಪಿಎಸ್‌ಐ ನಾಗಪ್ಪ ಅವರು ಜನತೆಯ ಸಹಕಾರದೊಂದಿಗೆ ಸಿಬ್ಬಂದಿಗಳ ಹಿತವನ್ನೂ ಕಾಯ್ದುಕೊಳ್ಳುತ್ತಾ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಹೇಳಿದರು.
ನಗರದ ಸಂಚಾರ ಪೊಲೀಸ್ ಠಾಣೆಯ 10 ಪೊಲೀಸ್ ಚೌಕಿಗಳನ್ನ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಜನತೆಯ ಸಹಕಾರದಿಂದಲೇ 10 ಪೊಲೀಸ್ ಚೌಕಿಗಳನ್ನ ನೀಡಿದ್ದಾರೆ. ಪೊಲೀಸರ ಹಿತವನ್ನ ಸಹ ಜನರು ನೋಡಿ ಈ ರೀತಿ ಚೌಕಿಗಳನ್ನ ದಾನ ಮಾಡಿದ್ದು ಸಂತಸದ ವಿಚಾರ ಎಂದರು.
ನಗರದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳಾಗುತ್ತಿದೆ. ನಗರದ ಸಂಚಾರ ಸಹ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸಂಚಾರ ಪೊಲೀಸರ ಕಾರ್ಯ ಹೆಚ್ಚಿದೆ. ಎಲ್ಲರ ಸಹಕಾರದಿಂದಲೇ ಪೊಲೀಸರು ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಭದ್ರಿನಾಥ್, ಸಂಚಾರ ಠಾಣೆಯ ಪಿಎಸ್‌ಐ ನಾಗಪ್ಪ, ರೋಟರಿ ಹಾಗೂ ಇತರ ದಾನಿಗಳು, ವಿವಿಧ ಠಾಣೆಗಳ ಪೊಲೀಸರು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top