ಶಿರಸಿ : ಅಡಿಕೆಯಲ್ಲಿ ಹಲವು ಆರೋಗ್ಯಕರ ಅಂಶವಿದೆ ಎನ್ನುವ ಸಂಶೋಧನೆಗಳು ಹೊರ ಬರುತ್ತಿದ್ದು, ಅಡಿಕೆ ಹಾನಿಕಾರಕವಲ್ಲ ಎನ್ನುವ ಕುರಿತು ಹಲವು ಸಂಶೋಧನೆಗಳು ಬಂದಿರುವ ಕುರಿತು ಸುಪ್ರಿಂ ಕೋರ್ಟ್ ಗೆ ಅಫಿಡಾವಿಟ್ ಸಲ್ಲಿಸಲಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿನ ರಾಘವೇಂದ್ರ ಮಠದಲ್ಲಿ ಪರಿವಾರ ಸಹಕಾರಿ ಸಂಘ ನಿಯಮಿತ ಇದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ವಿದೇಶಿ ಅಡಿಕೆ ಗುಣಮಟ್ಟವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಗೆ ಸಲ್ಲಿಸಿದ್ದೇವೆ. ಇಂಡೋನೇಶಿಯಾ ಸೇರಿದಂತೆ ಹೊರ ದೇಶದಿಂದ ಬರುವ ಅಡಿಕೆಯ ಕಳಪೆ ಗುಣಮಟ್ಟದ್ದು ಎಂದು ಕಂಡು ಹಿಡಿದಿದು ಇದನ್ನು ಸುಪ್ರಿಂ ಕೋರ್ಟ್ ಗೆ ಅಫಿಡಾವಿಟ್ ಸಲ್ಲಿಸಿದ್ದೇವೆ.
ಹೊರ ದೇಶದ ಅಡಿಕೆ ಆಮದು ಸಂಬಂಧಿಸಿದಂತೆ ಈಗಾಗಲೇ ಕೆಲವು ದೇಶಗಳೊಂದಿಗೆ ಒಪ್ಪಂದ ಇರುವುದರಿಂದ ಬರುತ್ತಿದೆ. ಆದರೆ ಗುಣಮಟ್ಟ ಪರೀಕ್ಷೆ ನಡೆಸಿ ಅದನ್ನು ತಿರಸ್ಕರಿಸುವ ಮೂಲಕ ಅಡಿಕೆ ಬೆಳೆಗಾರರ ರಕ್ಷಾ ಕವಚವಾಗಿ ಸರಕಾರ ಕೆಲಸ ಮಾಡಲಿದೆ ಎಂದರು.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ, ರಾಜಕೀಯ ಕ್ಷೇತ್ರಕ್ಕಿಂದ ಹೆಚ್ಚು ಸಮಾಧಾನ ಸಿಗುವಂತದ್ದು ಸಹಕಾರಿ ಕ್ಷೇತ್ರ. ಸಹಕಾರಿ ಕ್ಷೇತ್ರ ದಲ್ಲಿ ಶ್ರೀನಿವಾಸ್ ಹೆಬ್ಬಾರ್ ಪುಟ್ಟ ಹೆಜ್ಜೆ ಇಟ್ಟಿದ್ದಾರೆ. ಸಹಕಾರಿ ಕ್ಷೇತ್ರಕ್ಕೆ ಜಿಲ್ಲೆಗೆ ಇತಿಹಾಸವಿದೆ. ಸಹಕಾರಿ ಕ್ಷೇತ್ರ ಗಟ್ಟಿ ನಿಲುವು ಕಂಡಿರುವಂಥದ್ದು ರಾಜ್ಯದಲ್ಲಿ ಕೇವಲ 9 ಜಿಲ್ಲೆಗಳಲ್ಲಿ ಮಾತ್ರ. ಸಹಕಾರಿ ಕ್ಷೇತ್ರ ಜೀವಂತಿಕೆ ಇಲ್ಲದ ಜಿಲ್ಲೆಯಲ್ಲಿ ರೈತರು ಸಂಕಟದಲ್ಲಿದ್ದಾರೆ.
ಎಲ್ಲಿ ಸಹಕಾರ ಕ್ಷೇತ್ರ ಜೀವಂತವಾಗಿರುತ್ತದೆ. ಅಲ್ಲಿ ರೈತ ಉತ್ತಮ ಸ್ಥಿತಿಯಲ್ಲಿರುತ್ತಾನೆ. ಸಹಕಾರಿ ಕ್ಷೇತ್ರದ ಗಟ್ಟಿ ಇಲ್ಲದೇ ಇದ್ದರೆ ರೈತ ತೊಂದರೆ ಅನುಭವಿಸಬೇಕಾಗುತ್ತದೆ. ಇಲ್ಲಿನ ಸಹಕಾರಿ ದಿಗ್ಗಜರು ಜಿಲ್ಲೆಯ ಸಹಕಾರಿಯನ್ನು ಜೀವಂತಿಕೆಯಲ್ಲಿ ಇಟ್ಟಿದ್ದಾರೆ ಎಂದರು.
ಸಹಕಾರಿ ಬ್ಯಾಂಕುಗಳು ರೈತರ ಜೀವನಾಡಿಯಾಗಿದೆ. ಜಿಲ್ಲೆಯ ನೂರಾರು ಜನರು ಸಹಕಾರಿ ರಂಗಕ್ಕೆ ಜೀವ ತುಂಬಿದ್ದಾರೆ. ಸಹಕಾರಿ ಕ್ಷೇತ್ರವನ್ನು ಬೆಳಸದೇ ಇದ್ದರೆ ರೈತ ಸಂಕಟ ಎದುರಿಸಲಿದ್ದಾನೆ. ರಾಷ್ಟ್ರೀಕೃತ ಬ್ಯಾಂಕುಗಳು ಶ್ರೀಮಂತರಿಗೆ ಮಾತ್ರ ಸಾಲ ನೀಡುತ್ತದೆ. ಸಹಕಾರಿ ಬ್ಯಾಂಕುಗಳು ಬಡ ವಿಶ್ವಾಸಾರ್ಹರಿಗೆ 24 ಗಂಟೆಗಳಲ್ಲಿ ಸಾಲ ನೀಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಹಕಾರ ಕ್ಷೇತದಲ್ಲಿ ಸಾಧನೆ ಮಾಡಿದ ಟಿಎಂಎಸ್ ಅಧ್ಯಕ್ಷ ಜಿ. ಎಂ ಹೆಗಡೆ ಹುಳಗೊಳ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳೇಸರ, ಯಲ್ಲಾಪುರ ಟಿಎಂಎಸ್ ಅಧ್ಯಕ್ಷ ಎನ್.ಕೆ ಭಟ್ ಅಗ್ಗಾಶಿಕುಂಬ್ರಿ ಅವರನ್ನು ಸನ್ಮಾನಿಸಲಾಯಿತು.
ಪರಿವಾರ ಸಹಕಾರಿ ಬ್ಯಾಂಕ್ ನಿರ್ದೇಶಕ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಪರಿವಾರ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನದಾಸ್ ನಾಯಕ, ಪರಿವಾರ ಸಹಕಾರಿ ನಿಯಮಿತದ ಉಪಾಧ್ಯಕ್ಷ ಎಚ್. ವಿ ಧರ್ಮೇಶ, ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರಶಾಂತ್ ಕೆ.ಎಸ್ ಇದ್ದರು.
ಶಿರಸಿಯಲ್ಲಿ ಪರಿವಾರ ಸಹಕಾರಿ ಸಂಘ ಉದ್ಘಾಟಿಸಿದ ಗೃಹಸಚಿವ ಜ್ಞಾನೇಂದ್ರ
![](https://euttarakannada.in/wp-content/uploads/2022/10/IMG-20221023-WA0041-730x438.jpg?v=1666546955)