ಕಾರವಾರ: ಪಾರ್ಶ್ವ ಸೂರ್ಯ ಗ್ರಹಣವು ಅ.25ರಂದು ಭಾರತದಲ್ಲಿ ಗೋಚರಿಸಲಿದೆ. ನಗರದಲ್ಲಿ ಸಂಜೆ 5.03ರಿಂದ 5.48ರವರೆಗೆ ಗರಿಷ್ಟ 15.15% ಸೂರ್ಯ ಗ್ರಹಣವನ್ನು ವೀಕ್ಷಿಸಲಾಗುತ್ತದೆ.
ನಗರದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಶಿರಸಿಯ ಆಗಸ 360 ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಸೂರ್ಯ ಗ್ರಹಣ ವೀಕ್ಷಣೆಗೆ ಕೋಡಿಬಾಗದ ಕಾಳಿನದಿ ಸೇತುವೆಯ ಕೊನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಸೂರ್ಯ ಗ್ರಹಣವನ್ನು ವೀಕ್ಷಿಸಲು ಸರಿಯಾಗಿ ಸಂಜೆ 5 ಗಂಟೆಗೆ ಬರಬೇಕೆಂದು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.