Slide
Slide
Slide
previous arrow
next arrow

ವಿವಿಧ ಕಾಮಗಾರಿಗಳಿಗೆ ಸಚಿವ ಹೆಬ್ಬಾರ್ ಭೂಮಿ ಪೂಜೆ

300x250 AD

ಮುಂಡಗೋಡ: ತಾಲೂಕಿನ ಕುಸೂರ ಗ್ರಾಮದ ಎಸ್‌ಸಿ ಕಾಲೋನಿಗೆ 500 ಮೀಟರ್ ಕಾಂಕ್ರೀಟ್ ರೋಡ್, ಗಣೇಶಪುರ ಗ್ರಾಮದಲ್ಲಿ ಜಲಜೀವನ ಮಿಶನ್ ಕಾಮಗಾರಿ ಹಾಗೂ ಶ್ರೀಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಸಚಿವ ಶಿವರಾಮ ಹೆಬ್ಬಾರ್ ಭೂಮಿ ಪೂಜೆ ನೆರವೇರಿಸಿದರು.

ಇದೇ ವೇಳೆ ಸೈನಿಕರಿಗೆ ಸನ್ಮಾನ ಮಾಡಿ, ಸಾಲಗಾಂವ ಗ್ರಾಮದಲ್ಲಿ ಮಾರೆಮ್ಮಾ ದೇವಸ್ಥಾನ ಸಭಾಭವನಕ್ಕೆ ಅಡಿಗಲ್ಲು ಹಾಕಿ ಮಾತನಾಡಿದರು. ಸಣ್ಣ ಸಮಾಜದ ಹಾಗೂ ಬಡತನದಲ್ಲಿರುವ ಸಾಲಗಾಂವ ಗ್ರಾಮದ ಜನರು ನನ್ನಿಂದ ಏನೂ ಸಹಾಯ ಪಡೆಯದೇ 30 ಲಕ್ಷ ರೂ. ವೆಚ್ಚದಲ್ಲಿ ಮಾರೇಮ್ಮ ದೇವಸ್ಥಾನ ಕಟ್ಟುತ್ತಿದ್ದೀರಿ. ಇಷ್ಟೊಂದು ಚಂದ ಹಾಗೂ ದೊಡ್ಡ ಪ್ರಮಾಣದಲ್ಲಿ ದೇವಸ್ಥಾನವನ್ನು ಕಟ್ಟಿದ್ದಾರೆ. ಈ ಸಮಾಜದ ಹೃದಯ ಎಷ್ಟು ದೊಡ್ಡದು ಎಂದು ಗ್ರಾಮದ ಬಡಾವಣೆಯ ಜನರ ಗುಣಗಾನ ಮಾಡಿದರು. 4 ಲಕ್ಷದ ಸಭಾಭವನವಕ್ಕೆ ಮಂಜೂರಾಗಿದೆ. ನಾನು ಅವರು ಕೇಳಿದರೆ ಅದನ್ನು 5- 6 ಲಕ್ಷಕ್ಕೆ ಏರಿಸಲು ಸಹಾಯ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಗಣೇಶಪುರ ಗ್ರಾಮಸ್ಥರು ಸಚಿವ ಶಿವರಾಮ ಹೆಬ್ಬಾರರಿಗೆ ಪವರ್ ಸ್ಟಾರ್ ದಿ.ಪುನೀತ್ ರಾಜಕುಮಾರ್ ಅವರ ಫೋಟೊ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಲ್.ಟಿ.ಪಾಟೀಲ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದೇವು ಪಾಟೀಲ್, ಕೆ.ಸಿ.ಗಲಭಿ, ಪ್ರಮುಖರಾದ ಗುಡ್ಡಪ್ಪ ಕಾತೂರ, ವೈ.ಪಿ.ಪಾಟೀಲ್, ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ಕಟ್ಟಗಿ, ಗುಂಜಾವತಿ ಗ್ರಾ.ಪಂ ಅಧ್ಯಕ್ಷ ಬಸಯ್ಯ ನಡುವಿನಮನಿ, ಪರಶುರಾಮ ತಹಶೀಲ್ದಾರ್, ನಿಂಗಜ್ಜಾ ಕೋಣನಕೇರಿ ಮುಂತಾದವರು ಇದ್ದರು.

300x250 AD

ಮನೆಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಜಲಜೀವನ್ ಮಿಷನ್‌ನ ನಳಗಳಿಗೆ ಮೀಟರ್ ಅಳವಡಿಸಲಾಗುತ್ತಿದೆ ವಿನಃ ನೀರಿನ ಬಿಲ್ ತುಂಬಲು ಅಲ್ಲ. ದುಡ್ಡು ತುಂಬಲು ಮನೆ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ ಎಂಬುದದನ್ನು ಗ್ರಾಮಸ್ಥರು ಮನಸ್ಸಿನಿಂದ ತೆಗೆದು ಹಾಕಬೇಕು.

ಆರ್ಥಿಕವಾಗಿ ಸಬಲರಾಗಲು ರೈತರು ಗಮನ ಹರಿಸಬೇಕು

ಮುಂಡಗೋಡ ತಾಲೂಕಿಗೆ ಬಡತನ, ನಿರುದ್ಯೋಗ, ಅನಕ್ಷರತೆ ಬಹುವಾಗಿ ಕಾಡುತ್ತಿದೆ. ಇದನ್ನು ಹೋಗಲಾಡಿಸಲು ಸತತ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ರೈತಾಪಿ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕೆರೆಗಳನ್ನು ತುಂಬುವ ಯೋಜನೆ ಹಾಗೂ ಕಳೆದ ಮಳೆಗಾಲದಲ್ಲಿ ಡ್ಯಾಂ ಒಡೆದಾಗ ತಕ್ಷಣ ರೈತರಿಗೆ ಡ್ಯಾಂ ನೀರಿನ ವ್ಯವಸ್ಥೆಯಿಂದ ಕೃಷಿಗೆ ಅನುಕೂಲವಾಗಲೆಂದು 9 ಕೋಟಿ ವೆಚ್ಚದಲ್ಲಿ ಶೀಘ್ರವಾಗಿ ಕಾಮಗಾರಿ ಮಾಡಲಾಗಿದೆ. ಮುಂಡಗೋಡ ರೈತರು ಆರ್ಥಿಕವಾಗಿ ಸಬಲರಾಗಲು ಆರ್ಥಿಕ ಬೆಳೆಗಳತ್ತ ಗಮನ ಹರಿಸಬೇಕು ಎಂದು ಸಚಿವ ಹೆಬ್ಬಾರ್ ಹೇಳಿದರು.

Share This
300x250 AD
300x250 AD
300x250 AD
Back to top