ಸಿದ್ದಾಪುರ : ಜೀವನದಲ್ಲಿ ಪರಿಶ್ರಮ ಪಡದೇ ಏನನ್ನೂ ಸಾಧಿಸಲು, ಗಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸಹ ಸತತ ಪರಿಶ್ರಮ ಹಾಕಿ, ಪಠ್ಯ ವಿಷಯದ ಮೇಲೆ ಹಿಡಿತ ಸಾಧಿಸಿದರೆ ಮಾತ್ರ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆ ಆಗಲಿಕ್ಕೆ ಸಾಧ್ಯವೆಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು
ಅವರು ತಾಲೂಕಿನ ಹೆಗ್ಗರಣಿ ಪ್ರೌಢಶಾಲೆಯ 210 ಮಕ್ಕಳಿಗೆ ತಮ್ಮ ಟ್ರಸ್ಟ್ ವತಿಯಿಂದ ಉಚಿತ ಪಠ್ಯ ಪುಸ್ತಕ, ಕ್ರೀಡಾ ಸಾಮಗ್ರಿ ವಿತರಿಸಿ ನಂತರ ಮಾತನಾಡಿದ ಅವರು ಓದಿನಲ್ಲಿ ಆಸಕ್ತಿ, ಏಕಾಗ್ರತೆ, ನಿರಂತರ ಶ್ರಮ ಹಾಕಿದಾಗ ಮಾತ್ರ ನಿಮ್ಮಲ್ಲಿ ಪರೀಕ್ಷೆಯನ್ನು ಎದರಿಸುವ ಆತ್ಮವಿಶ್ವಾಸ ಬರುತ್ತದೆ. ಅದಕ್ಕಾಗಿ ನೀವು ಪರೀಕ್ಷೆಯ ಪೂರ್ವದಲ್ಲಿ ನಡೆಸುವ ನಿರಂತರ ತಯಾರಿ ಬಹಳ ಮುಖ್ಯ. ಇದು ನೀವು ಭವಿಷ್ಯದಲ್ಲಿ ಎದುರಿಸುವ ಪರೀಕ್ಷೆಯಲ್ಲಿ ಮಾತ್ರವಲ್ಲದೇ ಜೀವನದ ಪರೀಕ್ಷೆಯಲ್ಲೂ ಯಶಸ್ಸು ಗಳಿಸುವಂತೆ ಮಾಡುತ್ತದೆ. ಅದಕ್ಕಾಗಿ ಎಲ್ಲರೂ ಮನಸ್ಸು ಕೊಟ್ಟು ಓದಿ. ಎಲ್ಲಾ ವಿಷಯಗಳಲ್ಲೂ ಆಳವಾದ ಜ್ಞಾನ ಹೊಂದಿ. ಅನುಮಾನಗಳನ್ನು ಬಗೆಹರಿಸಿಕೊಂಡು ವಿಷಯದ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಿ. ಅಂದಾಗ ಮಾತ್ರ ನೀವು ಪರೀಕ್ಷೆಗಳನ್ನು ಯಾವುದೇ ರೀತಿಯ ಅಂಜಿಕೆ, ಆತಂಕ ಇಲ್ಲದೇ ನಿರ್ಭಯವಾಗಿ ಎದುರಿಸಲು ಸಾಧ್ಯವೆಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿ ಸುಖ, ವಿಲಾಸಿ ಜೀವನಕ್ಕೆ ಮಾರುಬಿದ್ದು ವಿದ್ಯಾರ್ಥಿ ಬದುಕನ್ನು ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳಬೇಡಿ. ಈ ಹಂತದಲ್ಲಿ ನಿಮ್ಮ ಬಹುಮುಖ್ಯ ಉದ್ದೇಶ ಮತ್ತು ಗುರಿ ಚೆನ್ನಾಗಿ ಓದುವುದೇ ಆಗಿರಬೇಕು. ಇಂದು ನೀವು ಸುಖಗಳನ್ನು ತ್ಯಾಗ ಮಾಡಿದರೆ ಭವಿಷ್ಯದಲ್ಲಿ ಸುಖವಾಗಿ ಇರುವಿರಿ ಎಂದು ಕಿವಿ ಮಾತು ಹೇಳಿದರು. ಈ ಸಂಧರ್ಬದಲ್ಲಿ ಸ್ಥಳಿಯ ಗ್ರಾಂ ಪಂಚಾಯತ್ ಅಧ್ಯಕ್ಷ ಅಬ್ದುಲ್ ಬೈರಿ , ಆದರ್ಶ ನಾಯ್ಕ, ಶಿಕ್ಷಕ ವೃಂದದವರು, ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು