• first
  second
  third
  Slide
  Slide
  previous arrow
  next arrow
 • ಸೋನಿಯಾ ಗಾಂಧಿಯವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಬ್ಬ ಶಕ್ತಿ : ಸುಜಾತಾ ಗಾವಂಕರ್

  300x250 AD

  ಶಿರಸಿ: ಸಿಟಿ ರವಿ, ಮೊದಲು ನಿಮ್ಮ ಮನೆ ಹೆಣ್ಣುಮಕ್ಕಳಿಗೆ ಧರ್ಮಸಂಸ್ಕೃತಿ ಬೋಧನೆ ಮಾಡಪ್ಪ. ಕುಡಿದು ಗಾಡಿ ಓಡಿಸಿ ಒಂದು ಜೀವ ತಗೆದ ನಿಮಗೂ ಕುಡುಕ ರವಿ ಅನಬಹುದೇ? ನಿಮ್ಮಂಥವರಿಂದ ಹಿಂದೂ ಸಮಾಜ ಪಾಠ ಕೇಳಬೇಕಾಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾವಂಕರ್ ಹೇಳಿದ್ದಾರೆ.
  ಸೋನಿಯಾ ಗಾಂಧಿಯವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಬ್ಬ ಶಕ್ತಿ. ಒಂದು ಹೆಣ್ಣಿನ ಪರಿಪೂರ್ಣತೆಗೆ ಇವರೇ ಮಾದರಿ. ವಿದೇಶಿ ಮಹಿಳೆಯಾಗಿದ್ದರು ಇವರು ಭಾರತೀಯ ಇಂದಿರಾಳ ಸೊಸೆಯಾಗಿ, ರಾಜೀವರ ಆದರ್ಶ ಪತ್ನಿಯಾಗಿ, ರಾಹುಲ್- ಪ್ರಿಯಾಂಕಳ ಅಪ್ಪಟ ತಾಯಿಯಾಗಿ, ಇಡೀ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿ, ಭಾರತದ ಸಂಸ್ಕೃತಿ- ಪರಂಪರೆಗೆ ಎಲ್ಲೂ ಚ್ಯುತಿ ಬರದ ಹಾಗೆ ನಡೆದುಕೊಂಡಿದ್ದಾರೆ. ಇದನ್ನು ಇಡೀ ಕೋಟ್ಯಂತರ ಭಾರತೀಯರು ಗಮನಿಸಿದ್ದಾರೆ. ಇಂತಹ ಮಹಾತಾಯಿ ಸೋನಿಯಾ ಎಷ್ಟೋ ಭಾರತೀಯ ಹೆಣ್ಣು ಮಕ್ಕಳಿಗೆ ಆದರ್ಶವಾಗಿದ್ದಾರೆ. ಇಂಥವರ ಬಗ್ಗೆ ಅತಿ ಕೀಳಾಗಿ ಅವಹೇಳನಕಾರಿಯಾಗಿ ಮಾತನಾಡಿದ ಸಿಟಿ ರವಿ, ಅಲ್ಲಾ ಓಟಿ ರವಿ ಅವರಿಗೆ ಮಹಿಳಾ ಕಾಂಗ್ರೆಸ್‌ನಿಂದ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.
  ಸೋನಿಯಾ ಮತ್ತು ರಾಜೀವ ಗಾಂಧಿಯವರ ಮದುವೆ ಕಾಲದಲ್ಲೂ ಕುಂಕುಮ ಹಚ್ಚಿಲ್ಲವೆಂದು ಹೇಳಿ ಹೆಣ್ಣಿನ ಕುಲಕ್ಕೆ ಸಿಟಿ ರವಿ ಅವಮಾನಿಸಿದ್ದಾರೆ. ನಮ್ಮ ನಾಯಕಿ ಯಾವತ್ತು ಭಾರತೀಯ ಸೊಸೆಯಾಗಿ ಬಂದರೋ ಅವತ್ತಿನಿಂದಲೂ ಅವರು ಭಾರತೀಯರಲ್ಲೊಬ್ಬರಾಗಿ ಜೀವನ ನಡೆಸಿದ್ದಾರೆ. ಇಷ್ಟೆಲ್ಲ ಮಾತನಾಡುವ ರವಿಯವರ ಮಡದಿಯ ಹಣೆಯಲ್ಲಿ ಕುಂಕುಮ ಇಲ್ಲ, ಕೈಯಲ್ಲಿ ಬಳೆಯಿಲ್ಲ. ನಿಮ್ಮ ಕುಟುಂಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ನಿಮಗೆ ನಮ್ಮ ನಾಯಕರ ಹೆಸರು ಹೇಳಲು ಯೋಗ್ಯತೆಯಿಲ್ಲ. ನೀವು ಸಾರ್ವಜನಿಕವಾಗಿ ಸೋನಿಯಾಜಿಯವರ ಕ್ಷಮೆ ಕೇಳಲೇ ಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೇರೆ ರೀತಿಯಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ. ನಿಜವಾದ ಹಿಂದೂ ಸಂಸ್ಕೃತಿಯ ಪ್ರಕಾರ ನಿಮ್ಮ ಮಡದಿಗೆ ಅರಿಶಿನ ಕುಂಕುಮ ಬಳೆಗಳನ್ನು ಪಾರ್ಸೆಲ್ ಕಳುಹಿಸಬೇಕಾಗುತ್ತದೆ ಎಂದರು.
  ಈ ಸಭೆಯಲ್ಲಿ ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಗೀತಾ ಭೋವಿ, ಬೀಬಿ ಸಾರಾ ಫಜಾನಾ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿ ಪಾಟೀಲ, ಸರಸ್ವತಿ ಗುನಗಾ, ಮಹಿಳಾ ಬ್ಲಾಕ್ ಅಧ್ಯಕ್ಷರಾದ ಗೀತಾ ಶೆಟ್ಟಿ, ಪೂಜಾ ನೇತ್ರೇಕರ್, ನಗರಸಭಾ ಸದಸ್ಯರಾದ ರುಬೇಕಾ ಫೆರ್ನಾಂಡಿಸ್, ಶಮೀಮಬಾನು ಶಿಕಾರಿಪುರ, ವನಿತಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಸದಸ್ಯರಾದ ಭಾರತಿ ಚನ್ನಯ್ಯಾ, ರೂಕ್ಸನಾ ಮನ್ಸೂರ್ ಖಾನ್, ತಾರಾ ನಾಯ್ಕ್ ಇದ್ದರು.

  300x250 AD
  Share This
  300x250 AD
  300x250 AD
  300x250 AD
  Back to top