Slide
Slide
Slide
previous arrow
next arrow

ಅಮಾನವೀಯ ಕೃತ್ಯ ಮೆರೆದ ಅರಣ್ಯ ಸಿಬ್ಬಂದಿಗಳು: ವ್ಯಾಪಕ ಖಂಡನೆ

300x250 AD

ಶಿರಸಿ: ಇತ್ತೀಚಿನ ದಿನಗಳಲ್ಲಿ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯ, ಕಿರುಕುಳ ಪ್ರಕರಣಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ದೇವನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ, ಹಚ್ಚಟ್ಟಿ ಗ್ರಾಮದ ಕೃಷ್ಣ ಕೆರಿಯ ಮರಾಠಿ ವಾಸ್ತವ್ಯದ ಮನೆ ಸಂಪೂರ್ಣವಾಗಿ ನೆಲಸಮ ಮಾಡಿ, ಅರಣ್ಯ ಅತಿಕ್ರಮಣದಾರರ ಕುಟುಂಬವನ್ನ ನಿರಾಶ್ರಿತರನ್ನಾಗಿ ಮಾಡಿರುವ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.  
 ಆರ್ಥಿಕವಾಗಿ ಅತ್ಯಂತ ಹಿಂದುಳಿದ ಕುಂಬ್ರಿ ಮರಾಠಿ ಸಮಾಜಕ್ಕೆ ಸೇರಿದವರಾಗಿರುವ ಸಂತ್ರಸ್ಥರು ವಾಸ್ತವ್ಯದ ಮನೆ ಇಲ್ಲದೇ ಅಕ್ಷರಸಹ ನಿರಾಶ್ರಿತರಾಗಿರುವುದು ಹಾಗೂ ಅರಣ್ಯ ಸಿಬ್ಬಂದಿಗಳು ಮಾನವಿಯತೆ ಮೀರಿ ವರ್ತಿಸಿರುವುದಕ್ಕೆ ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಹಿಂದಿನ ಅಧ್ಯಕ್ಷ ದೇವರಾಜ ಮರಾಠಿ ಹಾಗೂ ಗ್ರಾಮ ಪಂಚಾಯತ ಸದಸ್ಯ ಕಿರಣ ಮರಾಠಿ ಖಂಡಿಸಿದ್ದಾರೆ. ಅಲ್ಲದೇ, ಸಂತ್ರಸ್ಥ ಅರಣ್ಯವಾಸಿ ಕುಟುಂಬಕ್ಕೆ ನ್ಯಾಯ ಒದಗಿಸಿ ಕೋಡಬೇಕೆಂದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
ಸೂಕ್ತ ಕ್ರಮಕ್ಕೆ ರವೀಂದ್ರ ನಾಯ್ಕ ಆಗ್ರಹ:
 ಸಭಾಧ್ಯಕ್ಷರ ಕ್ಷೇತ್ರದಲ್ಲಿ ಪದೇ ಪದೇ ಅರಣ್ಯವಾಸಿಗಳ ಮೇಲೆ ಕಿರುಕುಳ, ದೌರ್ಜನ್ಯ ಹಾಗೂ ಹಿಂಸೆ ಜರಗುತ್ತಿರುವ ಪ್ರಕರಣಗಳ ಕುರಿತು ಸೂಕ್ತ ತನಿಖೆಗೆ ಒಳಪಡಿಸಿ, ಕಾನೂನು ಬಾಹಿರ ಕೃತ್ಯವೆಸಗಿದ ಅರಣ್ಯ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top