ದಾಂಡೇಲಿ :- ನಗರದ ಅಂಬೇವಾಡಿಯಲ್ಲಿ ಪೀಠೋಪಕರಣ ತಯಾರಿಕಾ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮಳಿಗೆಯಲ್ಲಿದ್ದ ಕೋಟ್ಯಾಂತರ ರೂ. ಪೀಠೋಪಕರಣಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಉದಯ ನಾಯ್ಕ ಎಂಬುವವರಿಗೆ ಸೇರಿದ್ದ ಪೀಠೋಪಕರಣ ತಯಾರಿಕಾ ಮಳಿಗೆ ಇದಾಗಿದ್ದು ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಬೆಂಕಿ ಹೊತ್ತಿಕೊಂಡ ರಭಸಕ್ಕೆ ಪಕ್ಕದ ಮಳಿಗೆಗಳಿಗೂ ತಾಗಿದ್ದು ಸಾಕಷ್ಟು ಹಾನಿ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ಆರಿಸಿದ್ದು ಹೆಚ್ಚಿನ ಅನಾಹುತ ಆಗದಂತೆ ತಡೆದಿದ್ದಾರೆ.