• Slide
    Slide
    Slide
    previous arrow
    next arrow
  • ಗಿಡ ಬೆಳೆಸುವ ಪಟಾಕಿ ತಯಾರಿಸಿದೆ ಮಂಗಳೂರಿನ ಪೇಪರ್ ಸೀಡ್ ಕಂಪನಿ

    300x250 AD

    ಮಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಪಟಾಕಿ ಪ್ರಿಯರು ಪಟಾಕಿ ಹೊಡೆಯಲು ಉತ್ಸಾಹಭರಿತರಾಗಿದ್ದಾರೆ. ಆದರೆ ಪರಿಸರ ಮಾಲಿನ್ಯದ ಕಾರಣದಿಂದ ಸರ್ಕಾರ ವಿಧಿಸಿರುವ ನಿರ್ಬಂಧಗಳು ಅವರಿಗೆ ನಿರಾಸೆ ಮೂಡಿಸಿದೆ.

    ಆದರೆ ಮಂಗಳೂರಿನ ಪೇಪರ್‌ ಸೀಡ್‌ ಕಂಪನಿಯು ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯನ್ನುಂಟು ಮಾಡದ ಮತ್ತು ಹೊಗೆ ರಹಿತ, ಶಬ್ದ ರಹಿತ ಪಟಾಕಿಗಳನ್ನು ತಯಾರಿಸಿದೆ.  ಪಟಾಕಿ ಪ್ರಿಯರು ಈ ತರಹೇವಾರಿ ಪಟಾಕಿಗಳನ್ನು ಕೊಂಡು ಬಂದು ತಮ್ಮ ಮನೆಗಳಲ್ಲಿ ಗಿಡಗಳನ್ನು ಬೆಳೆಸಬಹುದು.

    ಪಕ್ಷಿಕೆರೆಯಲ್ಲಿರುವ ನಿತಿನ್ ವಾಸ್ ಎಂಬುವವರ ಪೇಪರ್ ಸೀಡ್ಸ್ ಸಂಸ್ಥೆಯಲ್ಲಿ ಬೀಡಿ ಪಟಾಕಿ, ಲಕ್ಷ್ಮಿ ಬಾಂಬ್, ಸುಕ್ಲಿ ಬಾಂಬ್, ರಾಕೆಟ್, ದುರ್ಸು, ನೆಲಚಕ್ರ ಪಟಾಕಿಗಳು ತಯಾರುಗೊಂಡಿವೆ. ಪಟಾಕಿಗಳಂತೆ ಕಾಣುವ ಇವುಗಳು ಸಿಡಿಯುವುದಿಲ್ಲ. ಈ ಸಿಡಿಯದ ಪಟಾಕಿಗಳನ್ನು ನೈಜ ಪಟಾಕಿಗಳ ರೀತಿಯಲ್ಲಿ ತಯಾರಿಸಲಾಗಿದೆ. ಅದರ ಬಣ್ಣ, ಗಾತ್ರ ಇವುಗಳೆಲ್ಲ ನಿಜವಾದ ಪಟಾಕಿ ರೀತಿಯಲ್ಲಿ ಇದೆ.

    ಈ ಪಟಾಕಿಗಳನ್ನು ತೊಟ್ಟಿ, ಹೂ ಕುಂಡಗಳಿಗೆ ಹಾಕಿದರೆ ಅವು ಗಿಡವಾಗಿ ಬೆಳೆಯುತ್ತವೆ. ವಿವಿಧ ತರಕಾರಿ ಬೀಜಗಳನ್ನು ಇದರೊಳಗೆ ಹಾಕಲಾಗಿದೆ. ಈ ಪಟಾಕಿಗಳ ಒಳಗಡೆ ಹಾಕಿರುವ ಬೀಜಗಳು ಮಣ್ಣಿಗೆ ಬಿದ್ದು, ಅದಕ್ಕೆ ನೀರು ಹಾಕಿದರೆ ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ.
    https://twitter.com/AHindinews/status/1582903141716332544?ref_src=twsrc%5Etfw%7Ctwcamp%5Etweetembed%7Ctwterm%5E1582903141716332544%7Ctwgr%5E06bb1332fab611acf76c2ab2f6edc5ebb42c0d19%7Ctwcon%5Es1_c10&ref_url=https%3A%2F%2Fnews13.in%2F%3Fp%3D218777

    300x250 AD

    ಕೃಪೆ:http://news13.in

    Share This
    300x250 AD
    300x250 AD
    300x250 AD
    Leaderboard Ad
    Back to top