ನವದೆಹಲಿ: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ನಿಂದ ಹಿಂದೆ ಸರಿಯುವ ಪಾಕಿಸ್ಥಾನದ ಬೆದರಿಕೆಗೆ ಭಾರತ ಇಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ನೀವು ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಅಲ್ಲದೇ ಎಲ್ಲಾ ಅಗ್ರ ತಂಡಗಳು ವಿಶ್ವಕಪ್‌ಗಾಗಿ ಭಾರತಕ್ಕೆ ಬರುತ್ತಿವೆ ಎಂದಿದ್ದಾರೆ.
“ಮುಂದಿನ ವರ್ಷ ಭಾರತದಲ್ಲಿ ODI ವಿಶ್ವಕಪ್ ನಡೆಯಲಿದ್ದು, ಜಗತ್ತಿನ ಎಲ್ಲಾ ದೊಡ್ಡ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. ನೀವು ಯಾವುದೇ ಕ್ರೀಡೆಯಲ್ಲಿ ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಭಾರತವು ಕ್ರೀಡೆಗೆ, ವಿಶೇಷವಾಗಿ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದೆ. ಭಾರತವಿಲ್ಲದ ಕ್ರಿಕೆಟ್ ಎಂದರೇನು?” ಎಂದು ಕ್ರೀಡಾ ಸಚಿವರು ಪ್ರಶ್ನಿಸಿದ್ದಾರೆ.
ಮುಂದಿನ ವರ್ಷದ ಏಷ್ಯಾ ಕಪ್‌ಗಾಗಿ ಭಾರತವು ಪಾಕಿಸ್ಥಾನಕ್ಕೆ ಪ್ರಯಾಣಿಸುವುದಿಲ್ಲ ಮತ್ತು ಪಂದ್ಯಾವಳಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಬಹುದು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಮಂಗಳವಾರ ಹೇಳಿದ ನಂತರ ವಿವಾದ ಸೃಷ್ಟಿಯಾಗಿದೆ.
“ಕ್ರಿಕೆಟ್ ತಂಡದ ಪ್ರಯಾಣದ ಬಗ್ಗೆ ಗೃಹ ಸಚಿವಾಲಯ ನಿರ್ಧರಿಸುತ್ತದೆ. ಆಟಗಾರರ ಸುರಕ್ಷತೆ ಮತ್ತು ಭದ್ರತೆಯು ಪ್ರಮುಖ ವಿಷಯವಾಗಿದೆ, ”ಎಂದು ಸಚಿವರು ಹೇಳಿದ್ದಾರೆ.
ಕೃಪೆ: http://news13.in