ಮುಂಡಗೋಡ: ತಾಲೂಕಿನ ಚಿಗಳ್ಳಿ ಸರಕಾರಿ ಪ್ರೌಢಶಾಲೆಯ ಕಂಪೋಂಡ್ ಗೋಡೆಯನ್ನು ಯಾರೋ ದುಷ್ಕರ್ಮಿಗಳು ಕೆಡವಿ ಹಾಕಿದ್ದಾರೆ.
ಸೋಮವಾರ ಶಾಲಾ ಅವಧಿ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಗೋಡೆ ಸುಸ್ಥಿತಿಯಲ್ಲಿತ್ತು. ರಾತ್ರಿ ಯಾರೋ ದುಷ್ಟರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಶಾಲಾ ಶಿಕ್ಷಕರಿಗೆ ಹಾಗೂ ಎಸ್ಡಿಎಮ್ಸಿಗೆ ಗೋಡೆ ಕೆಡವಿದ್ದು ಗಮನಕ್ಕೆ ಬಂದರೂ ಸಹಿತ ಪೊಲೀಸರಿಗೆ ದೂರು ನೀಡಲು ವಿಳಂಬ ಧೋರಣೆ ತೊರುತ್ತಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಶೀಘ್ರವೇ ಪೊಲೀಸರಿಗೆ ದೂರು ನೀಡಬೇಕು. ಎಷ್ಟೇ ಪ್ರಭಾವಿಯಾದರೂ ಸಹಿತ ಗೋಡೆ ಕೆಡವಿದ ದುಷ್ಟರಿಗೆ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.