ಅಂಕೋಲಾ: ಕೆನರಾ ವೆಲ್‌ಫೇರ್ ಟ್ರಸ್ಟ್ನ ಡಾ.ದಿನಕರ ದೇಸಾಯಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಡಳಿತ ಮಂಡಳಿಯಿಂದನೂತನವಾಗಿ ನಿರ್ಮಿಸಲಾದ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಸುಸಜ್ಜಿತ ಹೈಟೆಕ್ ಶೌಚಾಲಯ ಹಾಗೂ ಗಂಡು ಮಕ್ಕಳ ನವೀಕೃತ ಶೌಚಾಲಯಗಳನ್ನು ಉದ್ಘಾಟನೆಗೊಳಿಸಲಾಯಿತು.
ಶೌಚಾಲಯಕ್ಕೆ ಟೈಲ್ಸ್ ಅಳವಡಿಸಲು ನೆರವು ನೀಡಿರುವ ಹರಿ ಓಂ ಟೈಲ್ಸ್ನ ಮಾಲಕ ಸಂತೋಷ ಕುಮಾವತರವರು ನೂತನ ಹೈಟೆಕ್ ಶೌಚಾಲಯವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ವೆಲ್‌ಫೇರ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಾನಂದ ವಿ.ಶೆಟ್ಟಿ ಮಾತನಾಡಿ, ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದು ಅಗತ್ಯವಾಗಿದೆ. ಅದು ನಮ್ಮ ಆದ್ಯತೆಯೂ ಆಗಿದೆ. ಸಿಬ್ಬಂದಿಗಳ ಬೇಡಿಕೆಯಂತೆ ಸುಸಜ್ಜಿತ ಶೌಚಾಲಯ ನಿರ್ಮಾಣ ಶಾಲೆಯ ಅಂದ ಹಾಗೂ ಆಕರ್ಷಣೆ ಹೆಚ್ಚಿಸಿದೆ ಎಂದರು.
ವೇದಿಕೆಯಲ್ಲಿ ಟ್ರಸ್ಟ್ನ ಪ್ರಶಾಂತ, ರಾಜು ಹಾಗೂ ಪಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಕೋಮಲ ಹಿರೇಮಠ, ಡಾ.ದಿನಕರ ದೇಸಾಯಿ ಸ್ಮಾರಕ ಶಾಲೆಯ ಮುಖ್ಯಾಧ್ಯಾಪಕ ಸುಭಾಸ ಕೆ.ನಾಯ್ಕ ಪಿಎಂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಚಂದ್ರಶೇಖರ ಕಡೇಮನಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ದಾನಿಗಳಾದ ಸಂತೋಷ ಕುಮಾವತ, ಶೌಚಾಲಯ ನಿರ್ಮಾಣ ಕೆಲಸಗಾರರಾದ ಗಣೇಶ ನಾಯ್ಕ, ಸಂತೋಷ ಬಿ.ಗಾಂವಕರ, ಗುಣವಂತ ಗಾಂವಕರ, ಅಜಿತ ಆಗೇರ ಹಾಗೂ ಹರೀಶ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ.ಶಿ ವೃಂದಾ ಶೆಟ್ಟಿಯವರು ಸರ್ವರನ್ನೂ ವಂದಿಸಿದರು. ಎನ್‌ಸಿಸಿ ಕಮಾಂಡರ ಜಿ.ಆರ್.ತಾಂಡೇಲ ಕಾರ್ಯಕ್ರಮ ನಿರ್ವಹಿಸಿದರು.