ತಿರುಪತಿ (ಆಂಧ್ರ ಪ್ರದೇಶ): ಜಗತ್ತಿನ ಶ್ರೀಮಂತ ದೇವರೆಂದೇ ಕರೆಯಲ್ಪಡುವ ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ದರ್ಶನವನ್ನು ಸೂರ್ಯಗ್ರಹಣ, ಚಂದ್ರಗ್ರಹಣ ಹಾಗೂ ದೀಪಾವಳಿ ಕಾರಣದಿಂದ ಮೂರು ದಿನಗಳ ಕಾಲ ರದ್ದು ಮಾಡಲಾಗಿದೆ.
ಅಕ್ಟೋಬರ್ 24ರಂದು ದೀಪಾವಳಿ ಆಚರಣೆ, ಅಕ್ಟೋಬರ್ 25ರಂದು ಸೂರ್ಯಗ್ರಹಣ ಮತ್ತು ನವೆಂಬರ್ 8ರಂದು ಚಂದ್ರಗ್ರಹಣದಿAದಾಗಿ ಮೂರು ದಿನಗಳ ಭಕ್ತರಿಗೆ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ ಇರುವುದಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಪ್ರಕಟಿಸಿವೆ.
ಸೂರ್ಯ ಮತ್ತು ಚಂದ್ರಗ್ರಹಣದ ದಿನದಂದು ದೇವಸ್ಥಾನದ ಬಾಗಿಲುಗಳನ್ನು ಬೆಳಗ್ಗೆ 8.00 ರಿಂದ ಸಂಜೆ 7.30ರ ವರೆಗೆ ಸುಮಾರು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಹಾಗೆಯೇ ದೀಪಾವಳಿ ದಿನವೂ ದೇವರ ದರ್ಶನವನ್ನು ರದ್ದುಗೊಳಿಸಿದ್ದರಿಂದ ಅಕ್ಟೋಬರ್ 23ರಂದು ಯಾವುದೇ ಶಿಫಾರಸು ಪತ್ರಗಳನ್ನೂ ಸ್ವೀಕರಿಸಲಾಗುವುದಿಲ್ಲ ಎಂದು ಟಿಟಿಡಿ ತಿಳಿಸಿದೆ.
ಮೂರು ದಿನ ತಿರುಪತಿ ತಿಮ್ಮಪ್ಪನ ದರ್ಶನ ಇಲ್ಲ!
