ಹಳಿಯಾಳ: ರೈತರ ಕಬ್ಬಿಗೆ ಉತ್ತಮ ದರ, ಹಳೆ ಬಾಕಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಆಡಳಿತ ಸೌಧದ ಎದುರು ನಡೆಯುತ್ತಿರುವ ರೈತರ ಅಹೋರಾತ್ರಿ ಹೋರಾಟ ಬುಧವಾರ 22 ದಿನ ಪೂರೈಸಿದೆ.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಇದೇ ಮೊದಲ ಬಾರಿಗೆ ಈ ರೀತಿ ಹೋರಾಟದಲ್ಲಿ ತೊಡಗಿದ್ದಾರೆ. ಬುಧವಾರದ ಹೋರಾಟಕ್ಕೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ, ಪತಂಜಲಿ ಯೋಗ ಶಿಬಿರ ಹಳಿಯಾಳ ಘಟಕ, ಸಿಐಟಿಯು, ಕರವೇ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಬ್ಬು ಬೆಳೆಗಾರ ಸಂಘದ ಉಕ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ, ಪತಂಜಲಿ ಹಳಿಯಾಳ ಅಧ್ಯಕ್ಷ ಕಮಲ ಸಿಕ್ವೇರಾ, ದಾಂಡೇಲಿ ಸಮಗ್ರ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂಖಾನ್, ಪ್ರಮುಖರಾದ ರೋಷನ ಬಾವಾಜಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿ, ಆರ್ ಎಮ್ ಮುಲ್ಲಾ, ಅಪ್ಪಾಜಿ ಶಹಪುರಕರ ಮೊದಲಾದವರು ಇದ್ದರು.