Slide
Slide
Slide
previous arrow
next arrow

ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ‘ಹುಟ್ಟುಹಬ್ಬದ ಸಂಭ್ರಮ’ ಕಾರ್ಯಕ್ರಮ

300x250 AD

ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿಯಮಿತದಿಂದ ಸಂಘದ 105ನೇ ವರ್ಷದ ‘ಹುಟ್ಟುಹಬ್ಬದ ಸಂಭ್ರಮ’ ಎಂಬ ಕಾರ್ಯಕ್ರಮವನ್ನು ಅ.20, ಗುರುವಾರದಂದು ಸಂಘದ ಶತಸಂಪನ್ನ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಸದಸ್ಯರ ಅನುಕೂಲಕ್ಕಾಗಿ ಎಸ್.ಎಂ.ಎಸ್.ಸೇವೆ ಹಾಗೂ ದೂರವಾಣಿ ಕೈಪಿಡಿಯ ಉದ್ಘಾಟನಾ ಸಮಾರಂಭ ಹಾಗು ಹಿರಿಯ ಸದಸ್ಯರಿಗೆ ಸನ್ಮಾನ ,ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕ ಜಿ.ಕೆ.ರಾಮಪ್ಪ ನಡೆಸಿಕೊಡಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತೀಹಳ್ಳಿ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಬೆಳಿಗ್ಗೆ 10ಗಂಟೆಯಿಂದ ಮಹಿಳೆಯರಿಗಾಗಿ ಡಬ್ಬಿ ಬೆಲ್ಲದಿಂದ ತಯಾರಿಸಿದ ಖಾದ್ಯಗಳ ಪ್ರದರ್ಶನ ಹಾಗು ಸ್ಪರ್ಧೆ, 11.30 ರಿಂದ ತ್ಯಾಗಲಿ ಸಂಘದ ಕಾರ್ಯವ್ಯಾಪ್ತಿಯ ಮಹಿಳೆಯರು ಹಾಗೂ ಪುರುಷರಿಗಾಗಿ ನೀರಿನಾಟ ಸ್ಪರ್ಧೆ,12.15ರಿಂದ ಧಾನ್ಯ ಗುರುತಿಸುವ ಸ್ಪರ್ಧೆ,ಜನಪದ ಗೀತೆ ಸ್ಪರ್ಧೆಗಳು ನಡೆಯಲಿವೆ.
ಅಂತೆಯೇ ಸಂಜೆ 4 ಗಂಟೆಯಿಂದ ಬಹುಮಾನ ವಿತರಣೆ ಕಾರ್ಯಕ್ರಮ, 5 ಗಂಟೆಗೆ ಶ್ರೀಮತಿ ಗೀತಾ ಹೆಗಡೆ ಮುಂಡಿಗೇಸರ ಇವರಿಂದ ಲಘು ಸಂಗೀತ ಕಾರ್ಯಕ್ರಮವಿದ್ದು, ತಬಲಾದಲ್ಲಿ ಕಿರಣ್ ಕಾನಗೋಡ್,ಹಾರ್ಮೋನಿಯಂನಲ್ಲಿ ಧೀರಜಕುಮಾರ್ ಶಿರಸಿ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top