• Slide
  Slide
  Slide
  previous arrow
  next arrow
 • ಅರಣ್ಯವಾಸಿಗಳಿಂದ ಬೃಹತ್ ಮೆರವಣಿಗೆ: ಸರಕಾರದ ವಿರುದ್ಧ ತೀವ್ರ ಆಕ್ರೋಶ

  300x250 AD

  ಸಿದ್ಧಾಪುರ: ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣಪತ್ರ ಸಲ್ಲಿಸಲು ಸರಕಾರಕ್ಕೆ 15 ದಿನ ಗಡವು ನೀಡಿದಾಗಿಯೂ ಸರಕಾರ ಕ್ರಮ ಜರುಗಿಸದ ಹಾಗೂ ಅರಣ್ಯ ಸಿಬ್ಬಂದಿಗಳ ದೌರ್ಜನ್ಯದ ಕುರಿತು ಅರಣ್ಯವಾಸಿಗಳಿಂದ ಬೃಹತ್ ಮೆರವಣಿಗೆ ಮತ್ತು ಪಾದಯಾತ್ರೆಯೊಂದಿಗೆ ಭೂಮಿ ಹಕ್ಕಿಗೆ ಹಕ್ಕೊತ್ತಾಯಿಸಿ ರ‍್ಯಾಲಿ ಸಂಘಟಿಸುವ ಮೂಲಕ ಸರಕಾರದ ವಿರುದ್ಧ ತೀವ್ರ ಆಕ್ರೋಶ ಅತಿಕ್ರಮಣದಾರರು ವ್ಯಕ್ತಪಡಿಸಿದರು. ಅಲ್ಲದೇ ಹಿರಿಯ ಅಧಿಕಾರಿಗಳ ಆಗಮನಕ್ಕಾಗಿ ಅತಿಕ್ರಮಣದಾರರು ಎರಡು ತಾಸಿಗೂ ಮಿಕ್ಕಿ ತಹಶೀಲ್ದಾರ್ ಕಛೇರಿಯ ಎದುರು ಪ್ರತಿಭಟನೆ, ಧರಣಿ, ಕಛೇರಿಗೆ ಮುತ್ತಿಗೆ ಹಾಗೂ ಆಕ್ರೋಶ ವ್ಯಕ್ತಪಡಿಸುವ ಘಟನೆಗಳು ಜರುಗಿದವು.

  ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಿದ್ಧಾಪುರದ ಬಿಳಗಿಯ ಶ್ರೀ ಮಾರಿಕಾಂಬಾ ದೇವಾಲಯದಿಂದ 14 ಕೀ.ಮೀ ರ‍್ಯಾಲಿ ಸಂಚರಿಸಿ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಹಶೀಲ್ದಾರ್ ಕಛೇರಿಯ ಮುಂದೆ ಸಭೆಯಾಗಿ ಪರಿವರ್ತನೆಗೊಂಡಿತು.

  ಮುಂಚಿತವಾಗಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದಾಗಿಯೂ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ವಹಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರದಿರುವುದು ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

  ಪ್ರತಿಭಟನೆಯಲ್ಲಿ ಪ್ರಧಾನ ಸಂಚಾಲಕರಾದ ರಾಜ್ಯ ಸಂಚಾಲಕರಾದ ತಿ.ನ ಶ್ರೀನಿವಾಸ ಮೂರ್ತಿ, ರೈತ ಸಂಘಟನೆಯ ಧುರೀಣ ವೀರಭದ್ರ ನಾಯ್ಕ, ರಾಘವೇಂದ್ರ ನಾಯ್ಕ ಕವಂಚೂರು, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ ನೀರಗಾನ್, ವಿನಾಯಕ ನಾಯ್ಕ, ಕೆಟಿ ನಾಯ್ಕ, ಸುನೀಲ್ ನಾಯ್ಕ ಸಂಪಖಂಡ, ಆಕಾಶ ಕೊಂಡ್ಲಿ, ಬಿಡಿ ನಾಯ್ಕ, ಕಾರ್ಲೂಯಿಸ್ ಮಾವಿನಗುಂಡಿ, ವಿಎನ್ ನಾಯ್ಕ ಬೇಡ್ಕಣಿ, ಎಮ್ ಪಿ ಗೌಡ, ಸುಶೀಲಾ ನಾಯ್ಕ ಕಾನಸೂರು, ಅಣ್ಣಪ್ಪ ನಾಯ್ಕ ಶಿರಲಗಿ ಮುಂತಾದವರು ನೇತೃತ್ವ ವಹಿಸಿದ್ದರು.

  300x250 AD

  ಅರಣ್ಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ – ಭರವಸೆ:
  ಅರಣ್ಯ ಅತಿಕ್ರಮಣದಾರರ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಡಿಎಫ್‌ಓ ಅಜ್ಜಯ್ಯ, ಎಸಿಎಫ್ ಹರೀಶ ಕುಮಾರ ಹಾಗೂ ತಹಶೀಲ್ದಾರ್ ಭಂಡಾರಿ ಅವರು ಆಗಮಿಸಿದ ನಂತರ ಅಸಮರ್ಪಕ ಜಿಪಿಎಸ್ ಕಾರ್ಯದಿಂದ ದಿನನಿತ್ಯ ಅರಣ್ಯ ಅತಿಕ್ರಮಣದಾರರಿಗೆ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಕಿರುಕುಳ, ದೌರ್ಜನ್ಯ, ಮಾನಸಿಕ ಹಿಂಸೆಗಳು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸುವುದಾಗಿ ಆಶ್ವಾಸನೆ ನೀಡಿದ ನಂತರ ಸಭೆ ಸಮಾಪ್ತವಾಯಿತು.

  ಸರಕಾರ ನಿಲುವು ಸ್ಪಷ್ಟ ಪಡಿಸಲಿ: ಸುಪ್ರೀಂ ಕೋರ್ಟಿನಲ್ಲಿ ಅರಣ್ಯವಾಸಿಗಳ ಹಕ್ಕಿಗೆ ಸಂಬಂಧಿಸಿ ಅಂತಿಮ ವಿಚಾರಣೆ ಜರಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಅರಣ್ಯವಾಸಿಗಳ ಪರ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು, ಜನರಲ್ಲಿ ಗೊಂದಲಮಾಡಿ ಹೋರಾಟ ದಿಕ್ಕು ತಪ್ಪಿಸುವ ಕೃತ್ಯವನ್ನು ಸಭಾಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಬಾರದೆಂದು ರಾಜ್ಯ ಹೋರಾಟ ಸಮಿತಿಯ ಪಧಾಧಿಕಾರಿಗಳಾದ ರಮೇಶ್ ಹೆಗಡೆ ತೀರ್ಥಹಳ್ಳಿ, ತಿ.ನ ಶ್ರೀನಿವಾಸ ಮೂರ್ತಿ ಸಾಗರ, ವಸಂತ ನಾಯ್ಕ ಅವರುಗಳು ಸಭಾಧ್ಯಕ್ಷರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದರು.

  ಕಾಗೋಡ ಹೇಳಿಕೆ: ಅರಣ್ಯವಾಸಿಗಳ ಹಕ್ಕು ನೀಡುವುದು ಸರಕಾರದ ಜವಾಬ್ದಾರಿ, ಭೂಮಿ ಹಕ್ಕಿಗಾಗಿ ಹೋರಾಟ ಅನಿವಾರ್ಯ, ಭೂಮಿ ಹಕ್ಕಿನ ಸಂಘಟನೆ ಜೊತೆಯಲ್ಲಿ ರಾಜಕೀಯ ಪ್ರತಿನಿಧಿಗಳ ಆಯ್ಕೆಯಲ್ಲಿಯೂ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಹೇಳಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top