Slide
Slide
Slide
previous arrow
next arrow

ಹಿಮ್ಮುಖವಾಗಿ ಚಲಿಸಿ ಮೂರು ರಿಕ್ಷಾಕ್ಕೆ ಡಿಕ್ಕಿಯಾದ ಸಾರಿಗೆ ಬಸ್!

300x250 AD

ಹೊನ್ನಾವರ: ತಾಲೂಕಿನ ಹಡಿನಬಾಳ ಸಮೀಪ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಮೂರು ರಿಕ್ಷಾಗೆ ಡಿಕ್ಕಿಯಾದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ಪ್ರತಿನಿತ್ಯದಂತೆ ಹೊನ್ನಾವರದಿಂದ ಆರ್ಮೊಡಿ ಹೋಗುತ್ತಿರುವ ಬಸ್ ಹಡಿನಬಾಳದಲ್ಲಿರುವ ಗುಂಡಬಾಳ ಮಹದ್ವಾರ ಪ್ರವೇಶಿಸುವಾಗ ಬ್ರೇಕ್ ಫೇಲ್ ಆಗಿದೆ. ಇದರ ಪರಿಣಾಮ ಬಸ್ ಹಿಂಬದಿಗೆ ಇಳಿಮುಖವಾಗಿ ಒಮ್ಮೆಲೆ ಬಂದು ರಿಕ್ಷಾ ತಂಗುದಾಣದಲ್ಲಿ ನಿಂತಿದ್ದ ಮೂರು ರಿಕ್ಷಾಗೆ ಡಿಕ್ಕಿಯಾಗಿ ಹಾನಿ ಸಂಭವಿಸಿದೆ.

300x250 AD

ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಕಡೆ ಬಸ್ ಬಂದು ನಿಂತಿದ್ದ ರಿಕ್ಷಾಗೆ ಡಿಕ್ಕಿಯಾದ ಪರಿಣಾಮ ರಿಕ್ಷಾ ಜಖಂ ಆಗಿದೆ. ಬಸ್ ಹಿಮ್ಮುಖವಾಗಿ ಬರುವಾಗ ರಿಕ್ಷಾ ಬಳಿ ಇದ್ದ ಚಾಲಕರು ರಿಕ್ಷಾ ಬಿಟ್ಟು ಓಡಿ ಹೋದ ಪರಿಣಾಮ ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Share This
300x250 AD
300x250 AD
300x250 AD
Back to top