ಬೆಂಗಳೂರು: ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡೆಂಟ್ ಮನೋಜ್ ಬಾಡ್ಕರ್ ಮತ್ತು ಕೋಸ್ಟ್ ಗಾರ್ಡ್ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ (ಸಿಜಿಡಬ್ಲ್ಯೂಡಬ್ಲ್ಯುಎ) ಅಧ್ಯಕ್ಷೆ ಅರುಣಿ ಬಾಡ್ಕರ್ ಅವರು ಎರಡು ದಿನಗಳ ಬೆಂಗಳೂರು ಭೇಟಿಯ ವೇಳೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರು.
ಸೋಮವಾರ ರಾಜಭವನದಲ್ಲಿ ಭೇಟಿಯಾದ ಬಾಡ್ಕರ್ ದಂಪತಿ, ಪ್ರಮುಖವಾಗಿ ಸಮುದ್ರದಲ್ಲಿ ಮೀನುಗಾರರಿಗೆ ಆಪತ್ತು ಎದುರಾದ ಸಂದರ್ಭ ಅವರನ್ನು ಹುಡುಕಲು ಮತ್ತು ರಕ್ಷಿಸಲು ದೃಢವಾದ ಕಾರ್ಯವಿಧಾನ ನಡೆಸಲು ಮತ್ತು ಸಮುದ್ರದಲ್ಲಿ ಸಾಹಸ ಕಾರ್ಯಕ್ಕೂ ಮುನ್ನ ಸುರಕ್ಷತಾ ಮಾರ್ಗಸೂಚಿಗಳ ಅನುಸರಣೆ ಸೇರಿದಂತೆ ವಿವಿಧ ವಿಷಯಗಳನ್ನು ರಾಜ್ಯಪಾಲರೊಂದಿಗೆ ಚರ್ಚಿಸಿದರು. ವಿಶೇಷವಾಗಿ ಕರ್ನಾಟಕ ಕರಾವಳಿಯ ಕೋಸ್ಟ್ಗಾರ್ಡ್ ಕಾರ್ಯಾಚರಣೆಗಳ ಕುರಿತು ರಾಜ್ಯಪಾಲರಿಗೆ ಬಾಡ್ಕರ್ ವಿವರಿಸಿದರು.
ರಚನಾತ್ಮಕ ಸ್ಥಿತಿಯಲ್ಲಿರುವ ಮುಂಬರುವ ಸ್ಟೇಟ್ ಆಫ್ ಆರ್ಟ್ ಇಂಡಿಯನ್ ಕೋಸ್ಟ್ ಗಾರ್ಡ್ ಅಕಾಡೆಮಿಯ ಬಗ್ಗೆ ತಿಳಿಸಲಾಯಿತು. ಇನ್ನು ಕೆಲವೇ ವರ್ಷಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು. ಕರಾವಳಿ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಕೋಸ್ಟ್ಗಾರ್ಡ್ ಪರಿಣಾಮಕಾರಿತ್ವ ಮತ್ತು ಚಾರ್ಟರ್ ಆಫ್ ಡ್ಯೂಟೀಸ್ ಸೇರಿದಂತೆ ಸಾಗರ ಹುಡುಕಾಟ ಮತ್ತು ಪಾರುಗಾಣಿಕಾ ಸಂಯೋಜಕರ ಪಾತ್ರವನ್ನು ಸಹ ಸಭೆಯಲ್ಲಿ ಸಂವಾದಿಸಲಾಯಿತು.
ಸಿಜಿಡಬ್ಲ್ಯೂಡಬ್ಲ್ಯುಎ ಪಶ್ಚಿಮದಿಂದ ಕರಾವಳಿ ಸಿಬ್ಬಂದಿಯ ಕುಟುಂಬಗಳಿಗೆ ಉತ್ಸಾಹ ಮೂಡಿಸುವ ಮತ್ತು ಅವರಲ್ಲಿ ಮೌಲ್ಯತೆ ಹೆಚ್ಚಿಸಲು ವಿವಿಧ ಕಲ್ಯಾಣ ಚಟುವಟಿಕೆಗಳ ಬಗ್ಗೆ ರಾಜ್ಯಪಾಲರಿಗೆ ವಿವರಿಸಲಾಯಿತು. ಭಾರತದ ಇಇಝೆಡ್‌ನಲ್ಲಿ ರಾಷ್ಟ್ರೀಯ ಕಡಲ ಹಿತಾಸಕ್ತಿಯನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಕೋಸ್ಟ್ ಗಾರ್ಡ್ನ ಬದ್ಧತೆಗಳಿಗೆ ಕಮಾಂಡರ್ ಭರವಸೆ ನೀಡಿದರು.
ಕೋಸ್ಟ್ ಗಾರ್ಡ್ ಕರ್ನಾಟಕದ ಸಹ ಕಮಾಂಡರ್ ಪಿ.ಕೆ.ಮಿಶ್ರಾದೀ ವೇಳೆ ಇದ್ದರು.