ಕಾರವಾರ: ಹಿಂದೂ ಗ್ರಾಹಕರಿಗೆ ಒತ್ತಾಯದಿಂದ ‘ಹಲಾಲ್’ ವಸ್ತುಗಳನ್ನು ನೀಡಬಾರದು ಹಾಗೂ ಹಿಂದೂ ಸಮಾಜಕ್ಕಾಗಿ ‘ಹಲಾಲ್ ರಹಿತ’ ವಸ್ತುಗಳನ್ನು ಒದಗಿಸಿ ಕೊಡಬೇಕು,ಹಲಾಲ್ ಪ್ರಮಾಣಪತ್ರ ನಿಷೇಧಿಸಿ ಕಾರವಾರದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕಾರವಾರದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ನೀಡಲಾಯಿತು.
ಸದ್ಯ ಭಾರತೀಯ ಮುಸಲ್ಮಾನರಿಂದ ಪ್ರತಿಯೊಂದು ಪದಾರ್ಥ, ವಸ್ತು ಇಸ್ಲಾಂಗನುಸಾರ ಅರ್ಥಾತ್ ‘ಹಲಾಲ್’ ಇರಬೇಕೆಂದು ಬೇಡಿಕೆಯಾಗುತ್ತಿದೆ. ಈ ಬೇಡಿಕೆಯು ಕೇವಲ ಮಾಂಸಕ್ಕಾಗಿ ಸೀಮಿತವಾಗಿರದೇ ಧಾನ್ಯ, ಹಣ್ಣು, ಸೌಂದರ್ಯಪ್ರಸಾಧನಗಳು, ಔಷಧಿಗಳು ಮುಂತಾದ ದಿನ ಬಳಕೆಯ ಉತ್ಪಾದನೆಗಳು ಸಹ ಹಲಾಲ್ ಪ್ರಮಾಣಿಕೃತವಾಗಿರಬೇಕು ಎಂದು ಮುಸಲ್ಮಾನರ ಬೇಡಿಕೆಯಿದೆ. ಅದಕ್ಕಾಗಿ ಹಿಂದೂ ಗ್ರಾಹಕರು ಅವಶ್ಯಕತೆಯಿಲ್ಲದಿದ್ದರೂ ಪ್ರತಿಯೊಂದು ಉತ್ಪಾದನೆಗಾಗಿ 50 ರಿಂದ 60 ಸಾವಿರ ರೂ.ಗಳನ್ನು ತುಂಬಿಸಿ ‘ಹಲಾಲ್’ ಪ್ರಮಾಣಪತ್ರ ಪಡೆಯಬೇಕಾಗುತ್ತಿದೆ, ಅತ್ಯಂತ ಮಹತ್ವದ್ದೇನೆಂದರೆ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂತರ್ಗತ ‘ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರ ((FSSAI)) ಹಾಗೂ ಪ್ರತಿಯೊಂದು ರಾಜ್ಯದಲ್ಲಿ ಸ್ವತಂತ್ರ ವಾದಂತಹ ‘ಆಹಾರ ಮತ್ತು ಔಷಧಿ ಆಡಳಿತ’ ವಿಭಾಗ (FDA) ಅಸ್ತಿತ್ವದಲ್ಲಿರುವಾಗ ಇದನ್ನು ಮುಸಲ್ಮಾನ ಸಂಘಟನೆಗಳಿಂದ ನೀಡಲಾಗುತ್ತಿದೆ. ಜಾತ್ಯತೀತ ಭಾರತದಲ್ಲಿ ಧಾರ್ಮಿಕ ಆಧಾರದಲ್ಲಿ ಸರ್ಟಿಫಿಕೇಶನ್ ಇದು ಕಾನೂನುಬಾಹಿರವಾಗಿದೆ.
ದೇಶದ ಕೇವಲ 15 ಶೇ. ದಷ್ಟಿರುವ ಮುಸಲ್ಮಾನ ಸಮಾಜಕ್ಕೆ ಇಸ್ಲಾಂ ಮಾನ್ಯ ‘ಹಲಾಲ್’ ತಿನ್ನಲಿಕ್ಕಿದೆ ಎಂದು 85% ಸಮಾಜದ ಮೇಲೆ ‘ಹಲಾಲ್’ಅನ್ನು ಹೇರಲಾಗುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯು ಇದನ್ನು ಕಠೋರ ಶಬ್ದಗಳಲ್ಲಿ ನಿಷೇಧಿಸುತ್ತಿದೆ. ಹಿಂದೂಗಳಿಗೆ ಒತ್ತಾಯಪೂರ್ವಕ ‘ಹಲಾಲ್’ ಪದಾರ್ಥಗಳನ್ನು ತಿನ್ನಿಸಿ ನೀವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡಿದ್ದಲ್ಲದೆ ಸ್ವಾತಂತ್ರ್ಯದ ಅಧಿಕಾರಕ್ಕೆ ಗದಾ ಪ್ರಹಾರ ಮಾಡುತ್ತಿದ್ದೀರಿ.ಹಲಾಲ್ ಪ್ರಮಾಣೀಕೃತವಾಗಿರಬೇಕು ಎಂದು ಹಿಂದೂ ವ್ಯಾಪಾರಿಗಳಿಗೆ ಕಡ್ಡಾಯ ಮಾಡಲಾಗುತ್ತಿದೆ, ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪರಿಗಳಿಂದ ಸಾವಿರಾರು ಕೋಟಿರುಪಾಯಿ ಲೂಟಿಮಾಡಲಾಗುತ್ತಿದೆ,
ಹೀಗಾಗಿ ಇದು ಕೇವಲ ಧರ್ಮಕ್ಕೆ ಸಂಬಂಧಿಸಿರದೇ ಇಸ್ಲಾಮೀ ಆರ್ಥಿಕ ವ್ಯವಸ್ಥೆಯಾಗುತ್ತಿದೆ, ಇದರ ಮೂಲಕ ಸಂಗ್ರಹವಾಗುತ್ತಿರುವ ಹಣ ಭಯೋತ್ಪಾದನಾ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿದೆ, ಇದು ಹಿಂದೂಗಳ ಮೇಲೆ ಮಾಡಿದ ಜಿಜಿಯಾ ತಲೆದಂಡವಾಗಿದೆ. ಹೀಗಾಗಿ ಸಂವಿಧಾನ ವಿರೋಧಿಯಾಗಿರುವ ಹಲಾಲ್ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಒತ್ತಾಯಿಸಿ ಕಾರವಾರದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರಸರ್ಕಾರಕ್ಕೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹಿಂದುತ್ವನಿಷ್ಟರಾದ ರಾಮದಾಸ ಕೂಡತರ್ಕರ್ , ಪಾಂಡರಿನಾಥ ಗುರವ, ಪ್ರಶಾಂತ್ ಪೆಡನೆಕರ್, ಉಲ್ಲಾಸ್ ಮುಂಜು ಹಿಂದೂ ಜನಜಾಗೃತಿ ಸಮಿತಿಯ ಅಶೋಕ್ ಚೌಹಾಣ್, ಪರೇಶ್ ಗೋವೇಕರ್,ಸಾಗರ್ ಕುರ್ಡೆಕರ, ಸನಾತನ ಸಂಸ್ಥೆಯ ಸೌ ಸಂಧ್ಯಾ ಅಂಧಾರೆ ಮುಂತಾದವರು ಉಪಸ್ಥಿತರಿದ್ದರು.