ಜೊಯಿಡಾ: ಜಿಲ್ಲಾ ಕುಣಬಿ ಸಮಾಜಕ್ಕೆ ಅಧ್ಯಕ್ಷರಾಗಿ ಸುಭಾಷ ಗಾವಡಾ ತೆಲೋಲಿ, ಕಾರ್ಯದರ್ಶಿಯಾಗಿ ಚಂದ್ರಶೇಖರ ಸಾವರಕರ ಅವಿರೋಧ ಆಯ್ಕೆಯಾಗಿದ್ದಾರೆ.
ಸುಭಾಷ ಗಾವಡಾ ಈ ಹಿಂದೆ ರಾಜ್ಯ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕುಣಬಿ ಸಮಾಜಕ್ಕೆ ಉಪಾಧ್ಯಕ್ಷರಾಗಿದ್ದರು. 1992ರಿಂದ ಕುಣಬಿ ಸಂಘಟನೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾದ ಇವರುಗಳನ್ನು ಕುಣಬಿ ಸಮಾಜದವರು, ತಾಲೂಕಿನ ಜನತೆ ಅಭಿನಂದಿಸಿದ್ದಾರೆ.