Slide
Slide
Slide
previous arrow
next arrow

3.81 ಲಕ್ಷ ರೂ. ಮೌಲ್ಯದ ವೈರ್ ಬಂಡಲು ಕಳವು ಮಾಡಿದವನ ಬಂಧನ

300x250 AD

ಕಾರವಾರ: ಎಲೆಕ್ಟ್ರಿಕಲ್ ಅಂಗಡಿಯಲ್ಲಿ 3.81 ಲಕ್ಷ ರೂ. ಮೌಲ್ಯದ ವೈರ್ ಬಂಡಲುಗಳನ್ನು ಕದ್ದೊಯ್ದಿದ್ದವನನ್ನು ಬಂಧಿಸುವಲ್ಲಿ ಚಿತ್ತಾಕುಲಾ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜಸ್ಥಾನ ಮೂಲದ, ಹಾಲಿ ಉತ್ತರ ಗೋವಾ ನಿವಾಸಿ ಈಶ್ವರಸಿಂಗ್ ರಜಪೂತ ಬಂಧಿತ. ಸದಾಶಿವಗಡ ಟೋಲ್‌ನಾಕಾದ ಹತ್ತಿರ ಇರುವ ಕುಶಾಲಿ ಕಾಂಪ್ಲೆಕ್ಸ್ನಲ್ಲಿನ ಕೃಷ್ಣ ಕದಂ ಎನ್ನುವವರ ಮಾಲೀಕತ್ವದ ಶಾಂತದುರ್ಗಾ ಅಂಗಡಿಯಲ್ಲಿ ತಿಂಗಳ ಹಿಂದೆ ನುಗ್ಗಿದ್ದ ಈಶ್ವರಸಿಂಗ್, ಅಂಗಡಿಯಲ್ಲಿದ್ದ ಎಲೆಕ್ಟ್ರಿಕಲ್ ವೈರ್‌ನ ಬಂಡಲುಗಳು ಮತ್ತು ಎಂಸಿಬಿ ಪೀಸ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ.

300x250 AD

ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಚಿತ್ತಾಕುಲಾ ಠಾಣೆ ಪೊಲೀಸರು, ಹಲವು ಆಯಾಮಗಳ ಮೂಲಕ ಖಚಿತ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ಡಾ.ಸುಮನ ಡಿ.ಪನ್ನೇಕರ್, ಹೆಚ್ಚುವರಿ ಎಸ್ಪಿ ಎಸ್.ಬದರಿನಾಥ್ ಮತ್ತು ಡಿವೈಎಸ್ಪಿ ವೆಲೆಂಟೈನ್ ಡಿಸೋಜಾರವರುಗಳ ಮಾರ್ಗದರ್ಶನ, ಕದ್ರಾ ಸಿಪಿಐ ಗೋವಿಂದರಾಜ ದಾಸರಿ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚಿತ್ತಾಕುಲಾ ಠಾಣೆ ಪಿಎಸ್‌ಐ ವಿಶ್ವನಾಥ ಎಂ.ನಿಂಗೊಳ್ಳಿ ಹಾಗೂ ಸಿಬ್ಬಂದಿ ಶ್ರೀಕಾಂತ್ ಡಿ.ನಾಯ್ಕ, ಅರುಣ್ ಕಾಂಬ್ಳೆ, ಜಯವಂತ ತಾಯ್ಕೆ, ವಿನಯ್ ಎಸ್.ಕಾಣಕೋಣಕರ, ಪ್ರವೀಣ್ ಗವಣೇಕರ, ಮಹಾದೇವ ಸಿದ್ದಿ, ಬಸವರಾಜ, ಕದ್ರಾ ಠಾಣೆಯ ಎಎಸ್‌ಐ ಮಹಾದೇವ ಘಳ, ಹುಸೇನ್ ಚಪ್ಪರಕರ, ನಾಗರಾಜ ತಿಮ್ಮಾಪುರ ಮತ್ತು ಆರ್.ಕೆ.ಜಗದೀಶ್ ಪಾಲ್ಗೊಂಡಿದ್ದರು

Share This
300x250 AD
300x250 AD
300x250 AD
Back to top