ಸಿದ್ಧಾಪುರ: ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಸುಫ್ರೀಂ ಕೋರ್ಟನಲ್ಲಿ ಅಂತಿಮ ವಿಚಾರಣೆಯ ಹಿನ್ನೆಲೆಯಲ್ಲಿ ಇಂದು ಅರಣ್ಯವಾಸಿಗಳಿಂದ ಸಿದ್ಧಾಪುರ ಬಿಳಗಿಯ ಮಾರಿಕಾಂಬ ದೇವಾಲಯ ಎದುರುಗಡೆಯಿಂದ ಮುಂಜಾನೆ 8:30 ಕ್ಕೆ ಬೃಹತ್ ಪಾದಯಾತ್ರೆ, ಮೆರವಣಿಗೆಯೊಂದಿಗೆ 14 ಕೀ.ಮೀ ಸಂಚರಿಸಿ ತಹಶೀಲ್ದಾರ್ ಕಚೇರಿಗೆ ಆಗಮಿಸಲಿರುವ ರ್ಯಾಲಿಯನ್ನ ಸಾಮಾಜಿಕ ಹಿರಿಯ ಚಿಂತಕ ಕಾಗೋಡ ತಿಮ್ಮಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ರಾಜ್ಯ ಸರಕಾರ ಸುಫ್ರೀಂ ಕೋರ್ಟನಲ್ಲಿ ತೀರಸ್ಕಾರವಾಗಿರುವ ಅರಣ್ಯವಾಸಿಗಳನ್ನ ಹಂತಹಂತವಾಗಿ ಒಕ್ಕಲೆಬ್ಬಿಸುವುದಾಗಿ ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹಾಗೂ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಕಿರುಕುಳ, ದೌರ್ಜನ್ಯ ಪ್ರತಿಭಟನಾರ್ಥ ಸಂಘಟಿಸಲಾದ ರ್ಯಾಲಿಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ಅವರು ಉಪಸ್ಥಿತಿ ಇರುವಿಕೆಗೆ ಕೇಳಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಹೇಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಅವರು ತಿಳಿಸಿದ್ದಾರೆ.
ಮೆರವಣಿಗೆಯ ಉದ್ಘಾಟನೆಯನ್ನ ಕಾಗೋಡ ತಿಮ್ಮಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಹೇಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಅವರು ತಿಳಿಸಿದ್ದಾರೆ.