• Slide
    Slide
    Slide
    previous arrow
    next arrow
  • ಅಪರಹಣವಾಗಿದ್ದ ಯುವತಿ ವಾಪಸ್:

    300x250 AD

    ದಾಂಡೇಲಿ: ಅಪಹರಣಕ್ಕೊಳಗಾಗಿದ್ದಳೆನ್ನಲಾಗಿದ್ದ ಬಾಲಕಿಯೊಬ್ಬಳು ಕೆಲವೇ ಗಂಟೆಗಳ ಬಳಿಕ ಅಪಹರಣಕಾರರಿಂದ ತಪ್ಪಿಸಿಕೊಂಡು ಸಂಬಂಧಿಕರೋರ್ವರ ಮನೆಗೆ ವಾಪಸ್ಸಾಗಿರುವ ಘಟನೆ ಹಳೆದಾಂಡೇಲಿಯ ಲಮಾಣಿಚಾಳದಲ್ಲಿ ಸೋಮವಾರ ನಡೆದಿದೆ.

    ಮನೆ ಸಮೀಪದಲ್ಲಿರುವ ಮದರಸಾಕ್ಕೆ ಕಲಿಕೆಗೊಂದು ಹೋಗಿದ್ದ 11 ವರ್ಷ ವಯಸ್ಸಿನ ಬಾಲಕಿ ಅಪಹರಣಕ್ಕೊಳಗಾಗಿದ್ದಳೆಂದು ಹೇಳಲಾಗಿತ್ತು. ಮದರಸಾಕ್ಕೆ ಹೋಗಿ ಬರುತ್ತಿರುವ ಸಂದರ್ಭದಲ್ಲಿ ಓಮ್ನಿಯಲ್ಲಿ ಬಂದ ಇಬ್ಬರು ಅಪರಿಚಿತರು ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದಿದ್ದರು ಎಂದು ಬಾಲಕಿಯ ಪಾಲಕರು ಆರೋಪಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೆ ಈ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಹೀಗೆ ಕರೆದುಕೊಂಡ ಅಪರಿಚಿತರು ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಸಮೀಪದಲ್ಲಿ ವಾಹನ ನಿಲ್ಲಿಸಿದ್ದ ಸಂದರ್ಭದಲ್ಲಿ ಬಾಲಕಿ ವಾಹನದಿಂದ ಕೆಳಗಿಳಿದು ಅಲ್ಲೆ ಹತ್ತಿರದ ಮಿರಾಶಿಗಲ್ಲಿಯಲ್ಲಿರುವ ಸಂಬಂಧಿಕರ ಮನೆಗೆ ಓಡಿ ಬಂದಿದ್ದಾಳೆ ಎನ್ನಲಾಗಿದೆ.

    300x250 AD

    ಅಲ್ಲಿಂದ ಆ ಮನೆಯವರು ಬಾಲಕಿಯ ಪಾಲಕರಿಗೆ ಮಾಹಿತಿಯನ್ನು ರವಾನಿಸಿದ್ದಾರೆ. ಈ ನಡುವೆ ಪೊಲೀಸರು ಪ್ರಕರಣದ ಬಗ್ಗೆ ಚುರುಕಿನ ತನಿಖೆ ಕೈಗೆತ್ತಿಕೊಂಡಿದ್ದಾರೆ. ಭಯಭೀತಳಾಗಿರುವ ಬಾಲಕಿ ಇದೀಗ ತನ್ನ ಮನೆ ಸೇರಿಕೊಂಡಿದ್ದಾಳೆ. ಆದರೆ ನಿಜವಾಗಿಯೂ ಬಾಲಕಿಯನ್ನು ಅಪಹರಿಸಲಾಗಿತ್ತೆ, ಅಪರಿಹರಿಸಿದವರು ಯಾರು ಎನ್ನುವ ಪ್ರಶ್ನೆಗಳು ಎದ್ದಿದ್ದು, ಪೊಲೀಸ್ ತನಿಖೆಯಿಂದ ಇವುಗಳಿಗೆ ಉತ್ತರ ಸಿಗಬೇಕಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top