• Slide
  Slide
  Slide
  previous arrow
  next arrow
 • ಬಿಜೆಪಿ ಸೇರುವ ಪ್ರಯತ್ನ ಬಿಡದ ಸತೀಶ್ ಸೈಲ್: ಶಾಸಕಿ ರೂಪಾಲಿ ಆರೋಪ

  300x250 AD

  ಕಾರವಾರ: ಬಿಜೆಪಿ ಸೇರಲು ಮಾಜಿ ಶಾಸಕ ಸತೀಶ್ ಸೈಲ್ ಹಿಂದಿನಿಂದಲೂ ಪ್ರಯತ್ನ ನಡೆಸಿದ್ದರು. ಆದರೆ ಆಗಲಿಲ್ಲ. ಇಂದಿಗೂ ಅವರು ಬಿಜೆಪಿ ಸೇರುವ ಪ್ರಯತ್ನವನ್ನ ಮಾಡುತ್ತಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.

  ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹದಿನೈದು ದಿನದ ಹಿಂದೆ ಸತೀಶ್ ಸೈಲ್ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಇದ್ದದ್ದನ್ನ ನಾನೇ ನೋಡಿದ್ದೇನೆ. ಕರಾವಳಿ ಭಾಗದ ಒಬ್ಬ ಶಾಸಕರ ಜೊತೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನ ಭೇಟಿ ಮಾಡಲು ಸೈಲ್ ಪ್ರಯತ್ನ ನಡೆಸಿದ್ದರು. ಆದರೆ ಅವರಿಗೆ ಅವಕಾಶ ಸಿಗಲಿಲ್ಲ ಎಂದು ಹೇಳಿದ್ದಾರೆ.

  ಸದ್ಯ ತಾನು ಕಾಂಗ್ರೆಸ್‌ನಲ್ಲಿ ಇದ್ದೇನೆ ಎಂದು ಸೈಲ್ ಹೇಳಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಕಾರ್ಯಕರ್ತರನ್ನ ದಾರಿ ತಪ್ಪಿಸಿ ಮೋಸ ಮಾಡುವ ಪ್ರಯತ್ನವನ್ನ ಸೈಲ್ ಮಾಡುತ್ತಿದ್ದಾರೆ. ಒಂದು ಕಡೆ ಬಿಜೆಪಿ ಹೇಗಾದರು ಮಾಡಿ ಸೇರಲೇ ಬೇಕು ಎಂದು ನಾನಾ ಪ್ರಯತ್ನ ನಡೆಸುತ್ತಿದ್ದು, ಇನ್ನೊಂದು ಕಡೆ ತಾನು ಕಾಂಗ್ರೆಸ್ನಲ್ಲಿದ್ದೇನೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನವನ್ನ ಸೈಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

  300x250 AD

  ಮಾಜಿ ಶಾಸಕ ಸತೀಶ್ ಸೈಲ್ ಕ್ಷೇತ್ರದಲ್ಲಿ ಒಂದು ಸಾವಿರಕ್ಕೂ ಅಧಿಕ ಕೋಟಿ ಅನುದಾನವನ್ನ ತಾನೇ ತಂದಿದ್ದು ಎಂದು ಹೇಳುತ್ತಾರೆ. ಎಲ್ಲಾ ಕಾಮಗಾರಿಗಳನ್ನ ತಾನೇ ತಂದಿದ್ದು ಎಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ ಅವರ ಕಾಲದಲ್ಲಿ ಬಂದ ಕಾಮಗಾರಿ ಯಾವುದು ನಮ್ಮ ಕಾಲದಲ್ಲಿ ಬಂದ ಕಾಮಗಾರಿ ಯಾವುದು ಎನ್ನುವುದು ಜನರಿಗೆ ತಿಳಿದಿದೆ. ಕಾಮಗಾರಿ ಘೋಷಣೆ ಮಾಡಿ ಹೋದರೆ ಆಗುವುದಿಲ್ಲ. ಅದಕ್ಕೆ ಅನುಧಾನವನ್ನ ನನ್ನ ಅವಧಿಯಲ್ಲಿ ತಂದಿದ್ದು ಎಂದು ರೂಪಾಲಿ ನಾಯ್ಕ ಹೇಳಿದ್ದಾರೆ.

  ನನ್ನ ಟಿಕೇಟ್ ತಪ್ಪಿಸಲೇ ಬೇಕು ಎಂದು ಸತೀಶ್ ಸೈಲ್ ಸೇರಿ ಹಲವರು ಪ್ರಯತ್ನ ಪಡುತ್ತಿದ್ದರೆ. ಸುಮ್ಮನೇ ನನ್ನ ಮೇಲೆ ಆರೋಪಗಳನ್ನ ಮಾಡುತ್ತಿದ್ದಾರೆ. ಜನರಿಗೆ ಯಾರ ಕಾಲದಲ್ಲಿ ಯಾವ ಕಾಮಗಾರಿಯಾಗಿದೆ. ಯಾರು ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದು ತಿಳಿದಿದೆ. ಚುನಾವಣೆಯಲ್ಲಿ ಇದಕ್ಕೆ ಉತ್ತರವನ್ನ ಜನರು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top