Slide
Slide
Slide
previous arrow
next arrow

ಮೂವರು ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್

300x250 AD

ದಾಂಡೇಲಿ: ನಗರದ ದಾಂಡೇಲಿ ಕರಾಟೆ ಕ್ಲಾಸ್’ನ ಮೂವರು ವಿದ್ಯಾರ್ಥಿಗಳು ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಆಯೋಜಿಸಲಾಗಿದ್ದ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ದಾಂಡೇಲಿ ಕರಾಟೆ ಕ್ಲಾಸಸ್ ಇಲ್ಲಿಯ ಗಗನ್ ರವಿಕುಮಾರ್ ನಾಯಕ, ಮಲಿಕ್ ರಿಹಾನ್ ಅಬ್ದುಲ್ ಕಿತ್ತೂರ್ ಮತ್ತು ಅಲ್ವಿನ್ ರಾಜು ಬೆಂಗಳೂರು ಈ ಮೂವರು ವಿದ್ಯಾರ್ಥಿಗಳೆ ಕರಾಟೆ ಬ್ಲ್ಯಾಕ್ ಬೆಲ್ಟ್ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.

300x250 AD

ಸತತ ಪರಿಶ್ರಮ ಹಾಗೂ ಕರಾಟೆ ತರಬೇತುದಾರರಾದ ಯಾಕುಬ್ ಶೇಖ ಮತ್ತು ರಿಯಾಜ್ ಬಿಡಿಕರ ಅವರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top