ಯಲ್ಲಾಪುರ:ತಾಲೂಕಿನ ಚವತ್ತಿಯ ಬಳಿ ರಾಜಹಂಸ ಬಸ್ ಮತ್ತು ಬೊಲೆರೋ ನಡುವೆ ಅಪಘಾತ ಸಂಭವಿಸಿದೆ.
ರಾಜಹಂಸ ಬಸ್ ಮೈಸೂರಿನಿಂದ ಯಲ್ಲಾಪುರಕ್ಕೆ ಶಿರಸಿ-ಯಲ್ಲಾಪುರ ಮಾರ್ಗದಿಂದ ಬರುತ್ತಿರುವಾಗ ರಾಜಹಂಸ ಮತ್ತು ಬೊಲೆರೋ ಮುಖಾಮುಖಿ ಡಿಕ್ಕಿ ಅಪಘಾತ ಸಂಭವಿಸಿದ್ದು,ಬಸ್’ನಲ್ಲಿದ್ದ ಪ್ರಯಾಣಿಕರಿಗೆ, ಅದೃಷ್ಟವಶಾತ್ ಯಾರಿಗೂ ಕೂಡ ಗಂಭೀರ ಗಾಯಗಳಾಗಲಿಲ್ಲ. ಬೆಳಿಗ್ಗೆ 8.20ರ ಸುಮಾರಿಗೆ ಅಪಘಾತವಾಗಿದೆ ಎನ್ನಲಾಗಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್, ಬೊಲೆರೋ ನಡುವೆ ಅಪಘಾತ: ತಪ್ಪಿದ ದುರಂತ
