Slide
Slide
Slide
previous arrow
next arrow

ಅ.17ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಗರಸಭೆ ಇಲಾಖೆಯಿಂದ ರಸ್ತೆ ಅಗಲಿಕರಣ ನಿಮಿತ್ತ ಮರ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.17, ಸೋಮವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.

ಪಟ್ಟಣ ಶಾಖೆಯ ಟಿ.ಎಸ್.ಎಸ್ ರಸ್ತೆ, ಎ.ಪಿ.ಎಂ.ಸಿ. ಕೆ.ಡಿ.ಸಿ.ಸಿ ಬ್ಯಾಂಕ್, ಸಮೃದ್ದಿನಗರ, ದುಂಡಸಿನಗರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಾಮಗಾರಿ ಪೂರ್ಣಗೊಂಡಲ್ಲಿ ಈ ಮೇಲೆ ತಿಳಿಸಿರುವ ಅವಧಿಯ ಮೊದಲೇ ವಿದ್ಯುತ್ ಸರಬರಾಜು ಮಾಡಲಾಗುವುದು. ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top