Slide
Slide
Slide
previous arrow
next arrow

81% ಬ್ರಾಡ್ ಗೇಜ್ ನೆಟ್‌ವರ್ಕ್‌ ವಿದ್ಯುದ್ದೀಕರಣಗೊಳಿಸಿದೆ ರೈಲ್ವೆ

300x250 AD

ನವದೆಹಲಿ: ಭಾರತೀಯ ರೈಲ್ವೇಯು ದೇಶದ ಒಟ್ಟು ಬ್ರಾಡ್ ಗೇಜ್ ನೆಟ್‌ವರ್ಕ್‌ನ ಶೇಕಡಾ 81ರಷ್ಟನ್ನು ವಿದ್ಯುದ್ದೀಕರಣಗೊಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ನೆಟ್‌ವರ್ಕ್‌ನ 65 ಸಾವಿರಕ್ಕೂ ಹೆಚ್ಚು ರೂಟ್ ಕಿಲೋಮೀಟರ್‌ಗಳಲ್ಲಿ (ಆರ್‌ಕೆಎಂ) ಕಳೆದ ತಿಂಗಳವರೆಗೆ 53,000ಕ್ಕೂ ಹೆಚ್ಚು ರೂಟ್ ಕಿಲೋಮೀಟರ್‌ಗಳನ್ನು ವಿದ್ಯುದ್ದೀಕರಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ, ಸೆಪ್ಟೆಂಬರ್‌ವರೆಗೆ, 2021-22ರ ಅವಧಿಯಲ್ಲಿನ 562 RKM ಗಳಿಗೆ ಹೋಲಿಸಿದರೆ 851 RKM ಗಳನ್ನು ವಿದ್ಯುದ್ದೀಕರಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ವಿದ್ಯುದ್ದೀಕರಣಕ್ಕೆ ನಿಗದಿಪಡಿಸಲಾದ ಗುರಿ 6,500 ಆರ್‌ಕೆಎಂಗಳು.

ಭಾರತೀಯ ರೈಲ್ವೇ ತನ್ನ ಸಂಪೂರ್ಣ ಬ್ರಾಡ್ ಗೇಜ್ ಜಾಲದ ವಿದ್ಯುದ್ದೀಕರಣದ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ. ಇದರಿಂದ ಉತ್ತಮ ಇಂಧನ ಬಳಕೆ, ಇಂಧನ ವೆಚ್ಚವನ್ನು ಕಡಿಮೆಯಾಗಲಿದೆ ಮತ್ತು ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಲು ಸಾಧ್ಯವಾಗಲಿದೆ.

300x250 AD

ಕೃಪೆ:-http://news13.in

Share This
300x250 AD
300x250 AD
300x250 AD
Back to top