ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಕ್ಟೋಬರ್ 16ರಂದು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ದೇಶಕ್ಕೆ ಸಮರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
2022-23ರ ಕೇಂದ್ರ ಬಜೆಟ್ ಭಾಷಣದಲ್ಲಿ, ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ ಸ್ಥಾಪನೆಯನ್ನು ದೇಶದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥವಾಗಿ ಹಣಕಾಸು ಸಚಿವರು ಘೋಷಿಸಿದ್ದರು.
ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳು ದೇಶದ ಮೂಲೆ ಮೂಲೆಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಇದು ವ್ಯಾಪಿಸಿದೆ. ಹನ್ನೊಂದು ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಹನ್ನೆರಡು ಖಾಸಗಿ ವಲಯದ ಬ್ಯಾಂಕ್‌ಗಳು ಮತ್ತು ಒಂದು ಸಣ್ಣ ಹಣಕಾಸು ಬ್ಯಾಂಕ್ ಈ ಪ್ರಯತ್ನದಲ್ಲಿ ಭಾಗವಹಿಸುತ್ತಿವೆ.
ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಭೌತಿಕ ಮಳಿಗೆಗಳನ್ನು ಹೊಂದಿದ್ದು, ಇದು ಜನರಿಗೆ ಉಳಿತಾಯ ಖಾತೆ ತೆರೆಯುವುದು, ಬ್ಯಾಲೆನ್ಸ್-ಚೆಕ್, ಪ್ರಿಂಟ್ ಪಾಸ್‌ಬುಕ್, ಹಣ ವರ್ಗಾವಣೆ, ಸ್ಥಿರ ಠೇವಣಿಗಳಲ್ಲಿ ಹೂಡಿಕೆ, ಸಾಲದ ಅರ್ಜಿಗಳು, ನೀಡಿದ ಚೆಕ್‌ಗಳಿಗೆ ಸ್ಟಾಪ್-ಪಾವತಿ ಸೂಚನೆಗಳಂತಹ ವಿವಿಧ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತದೆ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಕೆ, ಖಾತೆಯ ಸ್ಥಿತಿ ವೀಕ್ಷಣೆ, ತೆರಿಗೆಗಳ ಪಾವತಿ, ಬಿಲ್‌ಗಳನ್ನು ಪಾವತಿಸುವುದು, ನಾಮನಿರ್ದೇಶನಗಳನ್ನು ಮಾಡುವುದು ಕೂಡ ಇಲ್ಲಿ ಸಾಧ್ಯವಾಗಲಿದೆ.
ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಗ್ರಾಹಕರು ವರ್ಷಪೂರ್ತಿ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ವೆಚ್ಚ-ಪರಿಣಾಮಕಾರಿ, ಅನುಕೂಲಕರ ಪ್ರವೇಶ ಮತ್ತು ವರ್ಧಿತ ಡಿಜಿಟಲ್ ಅನುಭವವನ್ನು ಹೊಂದಲು ಅನುವು ಮಾಡಿಕೊಡುತ್ತದೆ.
ಕೃಪೆ:-http://news13.in