Slide
Slide
Slide
previous arrow
next arrow

ತ್ಯಾಜ್ಯಘಟಕವಾಗಿ ರೂಪುಗೊಂಡ ಪೆಡಂಬೈಲ್

300x250 AD

ಶಿರಸಿ: ಇಲ್ಲಿನ ನಗರಸಭೆ ಮತ್ತು ಕುಳವೆ ಪಂಚಾಯತಿಯ ಗಡಿ ಭಾಗದಲ್ಲಿರುವ ಪೆಡಂಬೈಲ್ ಹತ್ತಿರದ ರಸ್ತೆ ಬದಿಯ ಖಾಲಿ ಪ್ರದೇಶವನ್ನು ನಗರದಲ್ಲಿರುವ ಕೆಲವು ಅನಾಗರಿಕರು ಸ್ವಯಂ ಪ್ರೇರಿತರಾಗಿ ತ್ಯಾಜ್ಯಘಟಕವನ್ನಾಗಿ ಮಾಡಿಕೊಂಡಿರುವುದು ಅಲ್ಲಿನ ಸುತ್ತಮುತ್ತಲಿನ ನಾಗರಿಕರು ಹಾಗೂ ವಾಯುವಿಹಾರಿಗಳು ನರಕ ಯಾತನೆ ಅನುಭವಿಸುವಂತಾಗಿದೆ.
ಇಲ್ಲಿ ಎಷ್ಟೊಂದು ಪ್ರಮಾಣದಲ್ಲಿ ಅನಾಗರಿಕರಿಂದ ತ್ಯಾಜ್ಯ ಸಂಗ್ರಹವಾಗಿದೆ ಎಂದರೆ ನೋಡುಗರಿಗೆ ಇಲ್ಲೊಂದು ಚಿಕ್ಕದೊಂದು ತ್ಯಾಜ್ಯ ಘಟಕವೇ ಇರಬಹುದು ಎನ್ನುವಷ್ಟರ ಮಟ್ಟಿಗೆ ತ್ಯಾಜ್ಯ ಸಂಗ್ರಹವಾಗಿದೆ. ತ್ಯಾಜ್ಯ ಸಂಗ್ರಹವಾದ ಜಾಗದ ಪಕ್ಕದಲ್ಲಿಯೇ ಸ್ಮಶಾನವಿದ್ದರೂ ಆ ಸ್ಮಶಾನ ಸ್ವಚ್ಚವಿದೆ. ಆದರೆ ಸ್ಮಶಾನಕ್ಕೆ ಹೊಂದಿಕೊಂಡಿರುವ ಜಾಗ ಮಾತ್ರ ಘನತ್ಯಾಜ್ಯದಿಂದ ತುಂಬಿ ಗೊಬ್ಬು ನಾರುತ್ತ ಇಡೀ ಪರಿಸರವೇ ಹದಗೆಟ್ಟು ಹೋಗುತ್ತಿದೆ. ಇಲ್ಲೊಂದು ಸುಂದರವಾದ ಪರಿಸರ ಇರುವುದರಿಂದಲೇ ಸಾಕಷ್ಟು ಜನರು ಬೆಳಿಗ್ಗೆ ಮತ್ತು ಸಂಜೆ ತ್ಯಾಜ್ಯ ಸಂಗ್ರಹವಾಗಿರುವ ಪ್ರದೇಶದಿಂದಲೇ ವಾಯುವಿಹಾರಕ್ಕೆ ತೆರಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಿಂದ ಅವರೆಲ್ಲರೂ ಗೊಬ್ಬು ವಾಸನೆಗೆ ಇಲ್ಲಿಗೆ ಬರುವದನ್ನೆ ನಿಲ್ಲಿಸಿಬಿಟ್ಟಿದ್ದಾರಂತೆ.
ಇದು ರಾತ್ರಿ ಸಮಯದಲ್ಲಿ ಕದ್ದು ತ್ಯಾಜ್ಯ ತಂದು ಬಿಸಾಕುವ ಅನಾಗರಿಕರಿಗೆ ಅನುಕೂಲವಾಗಿ ಬಿಟ್ಟಿದ್ದು, ಮನೆಯ ಕೋಳಿ, ಕುರಿ, ಅಂಗಡಿ, ಹೋಟೆಲ್ ಹಾಗೂ ಕಟ್ಟಡಗಳ ತ್ಯಾಜದ ಜೊತೆಗೆ ಸತ್ತ ಪ್ರಾಣಿಗಳನ್ನು ಕೂಡಾ ಇಲ್ಕಿ ಯಾರ ಭಯವಿಲ್ಲದೇ ರಾಜರೋಷವಾಗಿ ಎಸೆಯುತ್ತಿದ್ದಾರೆ. ಈ ಬಗ್ಗೆ ಕುಳವೆ ಪಂಚಾಯತಿಗೆ ಹಾಗೂ ನಗರಸಭೆಗೆ ಸಾಕಷ್ಟು ಬಾರಿ ದೂರುಗಳು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದೆರಡು ತಿಂಗಳ ಹಿಂದೆ ವಸಂತಕುಮಾರ ಎಂಬುವವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತ್ಯಾಜ್ಯ ಎಸೆದ ಜಾಗದ ಹತ್ತಿರದ ಪ್ರದೇಶದಲ್ಲಿಯೇ ಕಾರ್ಯಕ್ರಮಕ್ಕೆ ಆಗಮಿಸುವುದರಿಂದ ಕೂಡಲೇ ತ್ಯಾಜ್ಯ ತೆಗೆಸಬೇಕೆಂದು ನಗರಸಭೆಗೆ ದಂಬಾಲು ಬಿದ್ದಿದ್ದರು.
ಇದರ ಪರಿಣಾಮವಾಗಿ ನಗರಸಭೆಯವರು ತಮದಲ್ಲದ ಜಾಗದಲ್ಲಿ ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಿಸಿದರು. ಆದರೆ ಜನರು ಮತ್ತೆಮತ್ತೆ ತ್ಯಾಜ್ಯ ತಂದು ಹಾಕುತ್ತಿರುವುದರಿಂದ ಮತ್ತೀಗ ಸುತ್ತಮುತ್ತಲಿನ ಪ್ರದೇಶ ಹೊಲಸು ನಾರುತ್ತಿದೆ.ಅದ್ದರಿಂದ ನಗರಸಭೆ ಅಥವ ಪಂಚಾಯತಿಯವರು ಕದ್ದು ತ್ಯಾಜ್ಯ ತಂದು ಹಾಕುವವರ ಮೇಲೆ ಕೂಡಲೇ ಕ್ರಮಕೈಗೊಂಡು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೋಟ್…
ಈ ಪ್ರದೇಶದಲ್ಲಿ ನಗರದ ಭಾಗದ ಜನರಿಂದಲೇ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹಸಿತ್ಯಾಜ್ಯ ಘನತ್ಯಾಜ್ಯ, ಇಲೆಕ್ಟ್ರಾನಿಕ್, ಇಲೆಕ್ಟ್ರಿಕಲ್ ಹಾಗೂ ಹೋಟೆಲ್ ತ್ಯಾಜ್ಯಗಳೇ ಇಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ತ್ಯಾಜ್ಯ ಸಂಗ್ರಹವಾಗಿರುವ ಪ್ರದೇಶ ನಗರ ಹಾಗೂ ಪಂಚಾಯತಿಗೆ ಹತ್ತಿರವಾಗಿದೆ. ಆದರೆ ನಗರ ಭಾಗದ ಜನರೇ ರಾತ್ರಿ ಸಮಯದಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕಾಗಿದ್ದ ನಗರಸಭೆ ಅಥವಾ ಪಂಚಾಯತಿಯವರು ನಿರ್ಲಕ್ಷತನ ತೋರುತ್ತಿದ್ದಾರೆ. ಹೀಗೆ ತ್ಯಾಜ್ಯ ಸಂಗ್ರಹವಾಗುತ್ತಿರುವುದರಿಂ ದ ವಾಯುವಿಹಾರಿಗಳಿಗೆ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಸಮಸ್ಯೆಯಾಗುತ್ತಿದ್ದು, ಕೂಡಲೇ ಕ್ರಮವಹಿಸಬೇಕೆಂದು ಸಂಬಂಧಪಟ್ಟವರಿಗೆ ಮನವಿ ಮಾಡುತ್ತೇವೆ.
• ವಸಂತಕುಮಾರ ಸಿ.ವಿ., ಗ್ರಾಮಸ್ಥ

300x250 AD
Share This
300x250 AD
300x250 AD
300x250 AD
Back to top