• Slide
    Slide
    Slide
    previous arrow
    next arrow
  • 5 ರೂ ವೈದ್ಯ ಶಂಕರೇಗೌಡಗೆ CNNnews18ನ ʼಇಂಡಿಯನ್‌ ಆಫ್‌ ದಿ ಇಯರ್‌ʼ ಪ್ರಶಸ್ತಿ

    300x250 AD

    ಬೆಂಗಳೂರು: 5 ರೂಪಾಯಿ ಡಾಕ್ಟರ್‌ ಎಂದೇ ಖ್ಯಾತರಾಗಿರುವ ಮಂಡ್ಯದ ಶಂಕರೇಗೌಡ ಅವರಿಗೆ  CNNnews18 ನ ಇಂಡಿಯನ್‌ ಆಫ್‌ ದಿ ಇಯರ್‌ ಪ್ರಶಸ್ತಿ ಲಭಿಸಿದೆ.

    ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಮಂಡ್ಯದಲ್ಲಿ ಸ್ವಂತ ಕ್ಲಿನಿಕ್‌ ಒಟ್ಟುಕೊಂಡಿರುವ ಇವರು ತಮ್ಮ ಬಳಿ ಬರುವ ರೋಗಿಗಳಿಗೆ 5 ರೂಪಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಾರೆ.

    ಅವರ ಈ ಸಾಧನೆಗೆ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರುಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    300x250 AD

    “ನಮ್ಮ ಮಂಡ್ಯದ ₹5 ಡಾಕ್ಟರ್‌ ಶಂಕರೇಗೌಡ ಅವರಿಗೆ ಇಂಡಿಯನ್‌ ಆಫ್‌ ದಿ ಇಯರ್ ಪ್ರಶಸ್ತಿ ದೊರಕಿರುವುದು ಅತ್ಯಂತ ಸಂತಸದ ವಿಚಾರ. ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಈ ಪ್ರಶಸ್ತಿಗೆ ಭಾಜನರಾಗಿರುವ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತಾವು ಪಡೆದ ಜ್ಞಾನವನ್ನು ಗ್ರಾಮೀಣ ಜನರ ಸೇವೆಗೆ ಮೀಸಲಿಡುವ ಶಂಕರೇಗೌಡರ ಸಂಕಲ್ಪ ಸದಾ ಪ್ರೇರಣೆ” ಎಂದು ಸಚಿವ ಅಶ್ವತ ನಾರಾಯಣ್‌ ಅವರು ಹೇಳಿದ್ದಾರೆ.

    “5 ರೂಪಾಯಿ ಡಾಕ್ಟರ್ ಎಂದೇ ಪ್ರಖ್ಯಾತಿಗಳಿಸಿರುವ ಮಂಡ್ಯದ ವೈದ್ಯ ಶ್ರೀ ಶಂಕರೇಗೌಡರಿಗೆ ಪ್ರಶಸ್ತಿ ಲಭಿಸಿರುವುದು ಅತ್ಯಂತ ಅಭಿನಂದನಾರ್ಹ ಸಂಗತಿಯಾಗಿದೆ. ಗ್ರಾಮೀಣ ಭಾಗದ ಜನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದಿದ್ದಾರೆ.

    ಕೃಪೆ :-http://news13.in

    Share This
    300x250 AD
    300x250 AD
    300x250 AD
    Leaderboard Ad
    Back to top