Slide
Slide
Slide
previous arrow
next arrow

ಮೋದಿ ತಾಯಿಗೆ ನಿಂದನೆ: ಆಪ್‌ ನಾಯಕನ ಹೇಳಿಕೆ ಖಂಡಿಸಿದ ಬಿಜೆಪಿ

300x250 AD

ನವದೆಹಲಿ: ಆಮ್ ಆದ್ಮಿ ಪಕ್ಷದ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರು ಪ್ರಧಾನಿಯವರ ತಾಯಿಯನ್ನು ಅಪಹಾಸ್ಯ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು,  ಆಮ್ ಆದ್ಮಿ ಪಕ್ಷದ ಮೇಲೆ ವಾಗ್ದಾಳಿಯನ್ನು ಚುರುಕುಗೊಳಿಸಿದೆ.

ಆಮ್ ಆದ್ಮಿ ಪಕ್ಷದ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರು ಪ್ರಧಾನಿಯವರ ತಾಯಿಯನ್ನು ಅಪಹಾಸ್ಯ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು,  ಆಮ್ ಆದ್ಮಿ ಪಕ್ಷದ ಮೇಲೆ ವಾಗ್ದಾಳಿಯನ್ನು ಚುರುಕುಗೊಳಿಸಿದೆ. ಇಂತಹ ನಿಂದನೆಗಾಗಿ ಆಮ್‌ ಆದ್ಮಿ ಪಕ್ಷಕ್ಕೆ ಗುಜರಾತ್ ರಾಜ್ಯದ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.

ಇಟಾಲಿಯಾ ಅವರ ಹಳೆಯ ವೀಡಿಯೊ ಗುರುವಾರ ವೈರಲ್‌ ಆಗಿದೆ, ಇದರಲ್ಲಿ ಅವರು ಪ್ರಧಾನಿ ಮೋದಿಯವರ 100 ವರ್ಷದ ತಾಯಿ ಹೀರಾಬಾ ಮೋದಿಯನ್ನು ಅಪಹಾಸ್ಯ ಮಾಡುತ್ತಿರುವುದು ಕಂಡು ಬಂದಿದೆ.  ಇಟಾಲಿಯಾ ಅವರು ಪ್ರಧಾನಿ ಮೋದಿಯವರಿಗೆ ಅವಹೇಳನಕಾರಿ ಪದವನ್ನು ಬಳಸಿದ್ದಾರೆಂದು   ಬಿಜೆಪಿ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

300x250 AD

“ಪ್ರಧಾನಿ ತಾಯಿಯನ್ನು ನಿಂದಿಸುವುದು ಗುಜರಾತ್‌ನಲ್ಲಿ ರಾಜಕೀಯ ಜನಪ್ರಿಯತೆ ಗಳಿಸಲು ಸಹಾಯ ಮಾಡುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪು. ಆ ತಪ್ಪಿಗೆ  ಗುಜರಾತಿಗಳು ಮುಂಬರುವ ಚುನಾವಣೆಯಲ್ಲಿ ರಾಜಕೀಯ ಬೆಲೆ ತೆರುವಂತೆ ಮಾಡುತ್ತಾರೆ” ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಸೂಚನೆಯ ಮೇರೆಗೆ ಇಟಾಲಿಯಾ ಅವರು ಹೇಳಿಕೆಗಳನ್ನು ನೀಡಿದ್ದಾರೆ.  ಗುಜರಾತ್ ಎಎಪಿ ನಾಯಕರು ಹಲವಾರು ಕಾಮೆಂಟ್‌ಗಳನ್ನು ಮಾಡಿದ್ದಾರೆ ಅದು ಹಿಂದೂ ಸಮಾಜ ಮತ್ತು ದೇವಸ್ಥಾನಕ್ಕೆ ಹೋಗುವ ಮಹಿಳೆಯರನ್ನು ಅವಮಾನ” ಮಾಡಿದೆ ಎಂದಿದ್ದಾರೆ.

ಕೃಪೆ:- http://news13.in

Share This
300x250 AD
300x250 AD
300x250 AD
Back to top