ಮುಂಡಗೋಡ: ತಾಲೂಕಿನ ಇಂದೂರ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ವಾಣಿಜ್ಯ ಮಳಿಗೆ ಹಾಗೂ ಗೊಡೌನ್ ಅನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಸಹಕಾರಿ ಸಂಘಗಳು ಅಭಿವೃದ್ಧಿಯಾಗಬೇಕಾದರೆ ರೈತರು ಇಲ್ಲಿಯೆ ವ್ಯವಹಾರ ಮಾಡಬೇಕು. ಹಾಗಿದ್ದಾಗ ಮಾತ್ರ ಸಂಘಗಳು ಅಭಿವೃದ್ಧಿಯಾಗಲು ಸಾಧ್ಯ. ಸಹಕಾರಿ ಸಂಘದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿದರೆ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಸೊಸೈಟಿಗಳು ಇರುವುದೇ ರೈತರಿಗಾಗಿ, ಹೆಚ್ಚು ಹೆಚ್ಚು ರೈತರು ಸೊಸೈಟಿಗಳ ಮೇಲೆ ಅವಲಂಬಿತರಾದರೆ ಸೊಸೈಟಿಗಳು ಅಭಿವೃದ್ಧಿಯ ಹಾದಿ ಹಿಡಿಯುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಸೊಸೈಟಿ ಅಧ್ಯಕ್ಷ ರವಿಚಂದ್ರ ದುಗ್ಗಳ್ಳಿ ಮಾತನಾಡಿ, ಸಚಿವ ಶಿವರಾಮ ಹೆಬ್ಬಾರ್ ನೀಡಿದ ಸಹಕಾರ ಸ್ಮರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿ.ಪಂ ಮಾಜಿ ಸದಸ್ಯರಾದ ಎಲ್.ಟಿ.ಪಾಟೀಲ, ರವೀಂದ್ರಗೌಡ ಪಾಟೀಲ, ಕೆಡಿಸಿಸಿ ಸದಸ್ಯ ಪ್ರಮೋದ ಢವಳೆ, ಕೆಡಿಸಿಸಿ ಅಧಿಕಾರಿ ಟಿ.ವಿ.ಶ್ರೀನಿವಾಸ ಇಂದೂರ ಗ್ರಾ.ಪಂ ಅಧ್ಯಕ್ಷೆ ರೇಣುಕಾ ಬಡಿಗೇರ, ನಾಗಭೂಷಣ ಹಾವಣಗಿ, ಇಂದೂರ ಸೊಸೈಟಿ ಉಪಾಧ್ಯಕ್ಷ, ಮುಂಡಗೋಡ ಪಟ್ಟಣ ಪಂಚಾಯತ್ ಅಧ್ಯಕ್ಷೆ ಜಯಸುಧಾ ಬಸವರಾಜ ಭೋವಿವಡ್ಡರ, ಗುಡ್ಡಪ್ಪ ಕಾತೂರ,ಕೆಂಜೋಡಿ ಗಲಿಬಿ, ಪರಶುರಾಮ ತಹಶೀಲ್ದಾರ, ಶಕ್ತಿಪ್ರಸಾದ ಜಂಭಗಿ, ಗುಂಜಾವತಿ ಗ್ರಾ.ಪಂ ಅಧ್ಯಕ್ಷ ಬಸಯ್ಯ ನಡುವಿನಮನಿ, ಸೊಸೈಟಿ ಸೆಕ್ರೇಟರಿ ಗಣಪತಿ ಶೇಟ್ ಹಾಗೂ ಸೊಸೈಟಿ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಇದ್ದರು.