ಕಾರವಾರ: ಅಂಕೋಲಾ ತಾಲೂಕಿನ ಭಾವಿಕೇರಿಯ ಸ್ಟುಡೆಂಟ್ಸ್ ಕೋ- ಆಪ್ ಸ್ಟೋರ್ಸ್ ಲಿ., ಸೆಕೆಂಡರಿ ಸ್ಕೂಲ್ ಮತ್ತು ಶಿರಗುಂಜಿ ಕೂಲಿಕಾರರ ಕಾಂಟ್ರಾಕ್ಟ್ ಮತ್ತು ಕೈಗಾರಿಕಾ ಸಹಕಾರ ಸಂಘ ನಿ., ಪೋಟ ನಿಯಮಕ್ಕನುಸಾರವಾಗಿ ಯಾವುದೇ ಕಾರ್ಯನಿರ್ವಹಿಸದೇ ಇರುವುದರಿಂದ ಕಾರವಾರ ಸಹಕಾರ ಸಂಘಗಳ ಉಪನಿಬಂಧಕರ ಆದೇಶದ ಮೇರೆಗೆ ದಿನಾಂಕ 2021ರ ಸೆ.6ರ ಪ್ರಕಾರ ಸಮಾಪನೆಗೊಂಡಿದ್ದು, ಅಂಕೋಲಾ ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ಸಮಾಪನಾಧಿಕಾರಿಯಾಗಿ ನೇಮಿಸಲಾಗಿದೆ.
ಸಂಘದ ವ್ಯವಹಾರವನ್ನು ಪೂರ್ಣಗೊಳಿಸುವ ಸಲುವಾಗಿ ಸಂಘದ ಕೊಡತಕ್ಕಂತಹ ಮತ್ತು ಬರತಕ್ಕ ಬಾಬ್ತುಗಳ ವಿಲೇವಾರಿ ಕುರಿತು ಚರ್ಚಿಸಲು, ಸಂಘದ ಅಡಾವೆಯನ್ನು ಶೂನ್ಯಗೊಳಿಸಿ, ಸಂಘದ ನೋಂದಣಿ ರದ್ದತಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಶಿರಗುಂಜಿ ಕೂಲಿಕಾರರ ಕಂಟಾಕ್ಟ್ ಮತ್ತು ಕೈಗಾರಿಕಾ ಸಹಕಾರ ಸಂಘದ ಅಂತಿಮ ಸರ್ವ ಸಾಧಾರಣಾ ಸಭೆಯನ್ನು ಅ.17ರಂದು ಬೆಳಿಗ್ಗೆ 10 ಗಂಟೆಗೆ ಹಾಗೂ ಸ್ಟುಡೆಂಟ್ಸ್ ಕೋ- ಆಪ್ ಸ್ಟೋರ್ಸ್ ಲಿ., ಸೆಕೆಂಡರಿ ಸ್ಕೂಲ್ ಸಂಘದ ಅಂತಿಮ ಸರ್ವ ಸಾಧಾರಣಾ ಸಭೆಯನ್ನು ಅ.18ರಂದು ಬೆಳಿಗ್ಗೆ 10 ಗಂಟೆಗೆ ಅಂಕೋಲಾ ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ, ಹಿಚ್ಕಡ ಗ್ರೂಪ್ ವಿವಿದೋದ್ದೇಶಗಳ ಸಹಕಾರ ಸಂಘ್ ನಿ., ಬೆಂಡಿ ಬಜಾರ ಕಚೇರಿಯಲ್ಲಿ ಕರೆಯಲಾಗಿರುತ್ತದೆ.
ಸಂಘದ ಸರ್ವ ಸದಸ್ಯರು ತಪ್ಪದೇ ಹಾಜರಾಗತಕ್ಕದ್ದು. ತಪ್ಪಿದಲ್ಲಿ ಅದರ ಮೇಲಿನ ಹಕ್ಕು ಬಾಧ್ಯತೆಗಳನ್ನು ಕಳೆದುಕೊಳ್ಳುತ್ತೀರೆಂದು ಅಂಕೋಲಾ ತಾಲೂಕು ಭಾವಿಕೇರಿ ಸ್ಟುಡೆಂಟ್ಸ್ ಕೋ-ಆಪ್ ಸ್ಟೋರ್ಸ್ ಲಿ., ಸೆಕೆಂಡರಿ ಸ್ಕೂಲ್ ಮತ್ತು ಶಿರಗುಂಜಿ ಕೂಲಿಕಾರರ ಕಾಂಟ್ರಾಕ್ಟ್ ಮತ್ತು ಕೈಗಾರಿಕಾ ಸಹಕಾರ ಸಂಘ ನಿ. ಸಮಾಪನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.