• Slide
    Slide
    Slide
    previous arrow
    next arrow
  • ನಿಲ್ಲದ ಭ್ರೂಣಹತ್ಯೆ: ಸ್ವರ್ಣವಲ್ಲಿ ಶ್ರೀ ಕಳವಳ

    300x250 AD

    ಶಿರಸಿ: ಭ್ರೂಣಹತ್ಯೆ ನಿಷೇಧ ಕಾಯಿದೆ ಬಂದರೂ ಭ್ರೂಣ ಹತ್ಯೆಯಂತಹ ಮಹಾಪಾಪದ ಕೆಲಸ ನಿಲ್ಲದಿರುವ ಬಗ್ಗೆ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

    ಅವರು ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಸೊಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗ್ರಾಮಾಭ್ಯುದಯ ಸಂಸ್ಥೆ, ಮಾರಿಕಾಂಬಾ ದೇವಸ್ಥಾನದವರ ಸಂಯುಕ್ತ ಆಶ್ರಯದಲ್ಲಿ ನಡೆದ ಸರ್ವ ದಂಪತಿಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಭ್ರೂಣ ಹತ್ಯೆ ತಡೆಗಟ್ಟುವುದೇ ದಂಪತಿಗಳ ಶಿಬಿರದ ಮುಖ್ಯ ಉದ್ದೇಶವಾಗಿದೆ. ಮುಂದಿನ ಸಮಾಜ ಹೇಗಿರಬೇಕು ಎಂದು ನಿರ್ಧರಿಸುವ ಅಧಿಕಾರ ದಂಪತಿಗಳಿಗಿರುತ್ತದೆ. ಮುಂದಿನ ತಲೆಮಾರಿನ ಪೀಠಿಕೆ ಬರೆಯಬಲ್ಲ ದಂಪತಿಗಳ ಶಿಬಿರ ಅತ್ಯಮೂಲ್ಯವಾದದ್ದಾಗಿದೆ. ವಿವಾಹ ವಿಚ್ಛೇದನಕ್ಕೆ ಅವಕಾಶ ಕೊಡಬಾರದು. ವಿವಾಹ ಎನ್ನುವುದು ಜೀವನದ ಬಹು ಪುಣ್ಯದ ಕೆಲಸ. ದೇವರ ಸಾಕ್ಷಿಯಾಗಿ ಬೆಳೆಸಿದ ಸಂಬಂಧವನ್ನು ಕಡೆದುಕೊಳ್ಳುವುದು ಧರ್ಮದಲ್ಲಿಲ್ಲ. ಈರ್ವರ ನಡುವೆ ಭಿನ್ನಾಭಿಪ್ರಾಯಗಳು ಬಂದಾಗ ಮಾತ್ರ ವಿಚ್ಛೇದನದ ಸಮಸ್ಯೆ ಬರುತ್ತದೆ. ದಂಪತಿಗಳಲ್ಲಿ ಭಿನ್ನಾಭಿಪ್ರಾಯಗಳು ಬರದಂತೆ ನೋಡಿಕೊಳ್ಳಬೇಕು ಎಂದರು.

    ಹುಟ್ಟಿದ ಮಕ್ಕಳಿಗೆ ತಂದೆ- ತಾಯಿಗಳು ಉತ್ತಮ ಸಂಸ್ಕಾರ ಕೊಡಬೇಕು. ಉತ್ತಮ ಸಂಸ್ಕಾರ ನೀಡಿದರೆ ಮುಂದೆ ಮಕ್ಕಳು ತಂದೆ ತಾಯಿಗಳಿಗೆ ಸುಖವಾಗಿ ನೋಡಿಕೊಳ್ಳುತ್ತಾರೆ. ನಮ್ಮ ನಡತೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.ಮಕ್ಕಳ ಮುಂದೆ ಉತ್ತಮ ರೀತಿಯಲ್ಲಿ ವರ್ತಿಸಬೇಕು ಎಂದರು.

    ಮುಂಜಾನೆಯಿಂದಲೂ ಸರ್ವ ದಂಪತಿಗಳಿಗೆ ಮಾರ್ಗದರ್ಶನ ಗೋಷ್ಠಿಗಳು ನಡೆದವು. ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳಾದ ಶಿವಾನಂದ ಶೆಟ್ಟಿ, ವತ್ಸಲಾ ಹೆಗಡೆ, ವೆಂಕಟೇಶ ಹೆಗ್ಡೆ ನಾರವಿ, ಸಂತೋಷ ಭಟ್ ಸೇರಿ ಹಲವರು ಉಪಸ್ಥಿತರಿದ್ದರು.

    300x250 AD

    ಹಿಂದೂಗಳು ಮೂರು ಮಕ್ಕಳನ್ನು ಹೊಂದಿ: ಕನಿಷ್ಠ ಮೂರು ಮಕ್ಕಳನ್ನು ದಂಪತಿಗಳು ಹೊಂದಬೇಕು. ಹಿಂದೂ ಸಮಾಜ ದೇಶದಲ್ಲಿ ಕ್ಷೀಣಿಸುತ್ತಿದೆ. ಭಾರತದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದೊಂದು ದಿನ ಹಿಂದೂಸ್ತಾನದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾದರೂ ಅಚ್ಚರಿ ಪಡುವಂತಿಲ್ಲ. ಅಂತಹ ದಿನಗಳು ಭಾರತದಲ್ಲಿ ಬಾರದಂತೆ ನೋಡಿಕೊಳ್ಳಬೇಕು ಎಂದು ಸ್ವರ್ಣವಲ್ಲಿ ಶ್ರೀ ಕರೆನೀಡಿದ್ದಾರೆ.

    ಭ್ರೂಣ ಹತ್ಯೆ ಪಾಪದ ಕೆಲಸವಾಗಿದೆ. ಭ್ರೂಣ ಹತ್ಯೆ ಮಾಡಿದವರಿಗೆ ಪಾಪಗಳು ದೋಷಗಳು ತಟ್ಟೆತಟ್ಟುತ್ತದೆ. ಪ್ರತ್ಯಕ್ಷವೇ ಅಥವಾ ಪರೋಕ್ಷವೇ ಆಗಿರಲಿ, ಭ್ರೂಣ ಹತ್ಯೇ ಮಾಡಬಾರದು. ಒಂದು ಹೆಣ್ಣಿನ ಮೂಲಕ ಭಗವಂತ ಒಂದು ಜೀವವನ್ನು ಭೂಮಿಗೆ ಕಳುಹಿಸಿರುತ್ತಾನೆ. ಭಗವಂತನ ಆಜ್ಞೆಯನ್ನು ನಾವು ಮೀರಬಾರದು.– ಸ್ವರ್ಣವಲ್ಲಿ ಶ್ರೀ

    Share This
    300x250 AD
    300x250 AD
    300x250 AD
    Leaderboard Ad
    Back to top