• Slide
    Slide
    Slide
    previous arrow
    next arrow
  • ರಜತ ಶಿಲ್ಪಿ ಪ್ರಶಾಂತ್ ಶೇಟ್ ಮನೆಗೆ ಸ್ಪೀಕರ್ ಭೇಟಿ

    300x250 AD

    ಸಿದ್ದಾಪುರ: ಪಟ್ಟಣದ ಹಾಳದಕಟ್ಟ ನಾಗರಕಟ್ಟೆಯ ಸುವರ್ಣ ಹಾಗೂ ರಜತ ಶಿಲ್ಪಿ ಪ್ರಶಾಂತ್ ಶೇಟ್ ಮನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸೌಹಾರ್ದ ಭೇಟಿ ನೀಡಿದರು.

    ಇತ್ತೀಚಿಗೆ ಬ್ರಹ್ಮೋಪದೇಶ ಪಡೆದ ನಿವೃತ್ತ ಮುಖ್ಯ ಅಧ್ಯಾಪಕ ಡಿ.ಎನ್.ಶೇಟ್ ಇವರ ಮೊಮ್ಮಗ ಹಾಗೂ ಪ್ರಶಾಂತ್ ಶೇಟ್‌ರ ಸುಪುತ್ರ ಚಿ.ಸಾಯಿಸಮರ್ಥಗೆ ಶುಭ ಹಾರೈಸಿ ಸ್ಪೀಕರ್‌ರವರು ಮಾತನಾಡಿ, ಬ್ರಹ್ಮೋಪದೇಶ ಪಡೆದ ನಂತರ ಗಾಯತ್ರಿ ಮಂತ್ರ ಜಪ, ಸಂಧ್ಯಾವಂದನೆ ಹಾಗೂ ದೇವರ ಪೂಜಾ ಪಾಠವನ್ನು ವಿದ್ಯಾಭ್ಯಾಸದ ಜೊತೆಗೆ ಪ್ರತಿನಿತ್ಯ ಪಾಲಿಸುವುದರಿಂದ ಮಕ್ಕಳಲ್ಲಿ ಧಾರ್ಮಿಕ ಜ್ಞಾನ ವೃದ್ಧಿಯಾಗಿ ಉಜ್ವಲ ಭವಿಷ್ಯ ನಿರ್ಮಾಣಗೊಳ್ಳುತ್ತದೆ ಎಂದರು.

    300x250 AD

    ನಂತರ ಪ್ರಶಾಂತ್ ಶೇಟ್ ತಯಾರಿಸಿದ ರಜತ ಕಲಾಕೃತಿಯನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶೇಟ್ ಕುಟುಂಬದವರ ಪರವಾಗಿ ಕಾಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಹಿರಿಯರಾದ ವಿಠ್ಠಲ್ ಎನ್.ಶೇಟ್, ಐ.ಕೆ.ನಾಯ್ಕ, ಅಚ್ಚುತ್ ಶಾನಭಾಗ್, ಶಿರಿಷ್ ವಿ.ಬೆಟಗೇರಿ, ಪಟ್ಟಣ ಪಂಚಾಯತಿ ಸದಸ್ಯರಾದ ಮಾರುತಿ ನಾಯ್ಕ ಹೊಸೂರು, ನಂದನ್ ಬೋರ್ಕರ್, ವಾದಿರಾಜ ಡಿ.ಶೇಟ್, ಗಜಾನನ ವಿ.ಶೇಟ್, ನಾಗರಾಜ್ ವಿ.ಶೇಟ್, ಟಿ.ಕೆ.ಎಂ.ಆಜಾದ್ ಹಾಗೂ ನಾಗದೇವತಾ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top