• Slide
    Slide
    Slide
    previous arrow
    next arrow
  • ನೌಕಾನೆಲೆ ಕೆಲಸದಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿ: ರಾಘು ನಾಯ್ಕ

    300x250 AD

    ಕಾರವಾರ: ನೌಕಾನೆಲೆಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆಯಲ್ಲಿ ಕೆಲಸ ನೀಡಬೇಕು. ಇಲ್ಲದೆ ಇದ್ದಲ್ಲಿ ನೌಕಾನೆಲೆ ಗೇಟ್ ತಡೆದು ಪ್ರತಿಭಟನೆ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ರಾಘು ನಾಯ್ಕ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕಾನೆಲೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುತ್ತಿಲ್ಲ. ಗುತ್ತಿಗೆ ಪಡೆದವರು ಹೊರ ರಾಜ್ಯದವರನ್ನು ಕರೆತಂದು ಇಲ್ಲಿ ಕೆಲಸ ನೀಡುತ್ತಿದ್ದಾರೆ. ಅಲ್ಲದೆ ಸ್ಥಳೀಯರಿಗೆ ಚಾಲಕ, ಕ್ಲೀನರ್ ಸೇರಿದಂತೆ ಕೆಳ ದರ್ಜೆಯ ಕೆಲಸಗಳನ್ನು ಮಾತ್ರ ನೀಡಲಾಗುತ್ತಿದೆ. ಯೋಜನೆಗಾಗಿ ಮನೆ ಜಮೀನನ್ನು ಕೊಟ್ಟವರು ಇಂದು ಗೋವಾ ಸೇರಿದಂತೆ ಇನ್ನಿತರ ಭಾಗಗಳಿಗೆ ಕೆಲಸಕ್ಕೆ ತೆರಳಬೇಕಾಗಿದೆ. ಅಲ್ಲದೆ ಸೀಬರ್ಡ್ ನೌಕಾನೆಲೆಗೆ ಸ್ಥಳೀಯರು ವಾಹನಗಳನ್ನು ಬಿಡುತ್ತಿದ್ದು, ಅತಿ ಕಡಿಮೆ ದರ ನೀಡಲಾಗುತ್ತಿದೆ. ಆದರೆ ಹೊರ ರಾಜ್ಯಗಳಿಂದ ಬಂದಂತಹ ಅದೇಷ್ಟೊ ವಾಹನಗಳು ತೆರಿಗೆ ಪಾವತಿಸದೆ ನೌಕಾನೆಲೆಯಲ್ಲಿ ಓಡಾಡುತ್ತಿವೆ. ಆರ್‌ಟಿಓ ಅವರಿಗೆ ಒಳಗೆ ತೆರಳಲು ಅವಕಾಶ ನೀಡದ ಕಾರಣ ರಾಜ್ಯ ಸರ್ಕಾರಕ್ಕೆ ಸಾಕಷ್ಟು ನಷ್ಟವಾಗುತ್ತಿದೆ ಎಂದರು.

    ಇನ್ನು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಕುಮಟಾದಲ್ಲಿ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಭರವಸೆ ನೀಡಿದ್ದು, ಅವರ ಮಾತಿನಲ್ಲಿ ವಿಶ್ವಾಸವಿದೆ. ಅಲ್ಲದೆ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದಾರೆ. ಇದರಿಂದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಸಂಬಂಧದ ಪಾದಯಾತ್ರೆ ಹೋರಾಟ ಕೈಬಿಡಲಾಗುವುದು ಎಂದು ಹೇಳಿದರು.

    300x250 AD

    ಇತ್ತೀಚೆಗೆ ಕಾರವಾರ ಯುವತಿಯೋರ್ವಳು ಅಪಘಾತದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾದಾಗ ಸಮರ್ಪಕವಾಗಿ ಪ್ರಾಥಮಿಕ ಚಿಕಿತ್ಸೆ ನೀಡದ್ದಕ್ಕೆ ಯುವತಿಯ ಕೈ ಬೆರಳು ಕಟ್ ಮಾಡಲಾಗಿದೆ. ಇಲ್ಲಿನ ವೈದ್ಯರ ನಿರ್ಲಕ್ಷö್ಯಕ್ಕೆ ಮಂಗಳೂರು ಆಸ್ಪತ್ರೆ ವೈದ್ಯರು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ವರ್ಗಾಯಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಮಟಕಾ, ಕೋಳಿ ಅಂಕ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ನೀಡಿದ ಅವರು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿದರು.

    ಈ ವೇಳೆ ವಕೀಲರಾದ ಎ.ಡಿ.ನಾಯ್ಕ, ಅರುಣ್, ಅನಿಲ್ ಕೊಚರೇಕರ್, ಶಿವಾಜಿ ಉಳಗೇಕರ್, ನಂದು, ಗಣೇಶ, ಶಂಕರ ಗುನಗಿ, ಶಿವಾನಂದ ಪಡುವಳಕರ್, ಶಬ್ಬಿರ್ ಶೇಖ್ ಇನ್ನಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top